ರಾಜಲಬಂಡಾ ಗ್ರಾಮದಲ್ಲಿ ಜಾನುವಾರುಗಳಿಗೆ ಕುಡಿಯಲು ಮೀಸಲಿಟ್ಟಿದ್ದ 30 ಎಕರೆ ಕೆರೆಯನ್ನೆ ಭೂಗಳ್ಳರಿಂದ ಒತ್ತುವರಿ
ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದ ಸರ್ವೆ ನಂಬರ್ 47 ಮತ್ತು48 ರಲ್ಲಿ ಜಾನುವಾರುಗಳಿಗೆ ಕುಡಿಯಲು ಸರಕಾರ ಜಮೀನು ಮೀಸಲಿಟ್ಟಿದೆ, ಆದರೆ ರಾಜಲಬಂಡಾ ಗ್ರಾಮದ ಕೆಲ ಬಲಾಢ್ಯರು ಕೆರೆಯನ್ನೆ ಒತ್ತುವರಿ ಮಾಡಿರುವುದಾಗಿ ಆರೋಪಿಸಿದ್ದಾರೆ.
ಮಾನ್ವಿ ತಹಸೀಲ್ದಾರ್ ರಾಜು ಫಿರಂಗಿ ಹಾಗು ಕುರ್ಡಿ ನಾಡ ತಹಸೀಲ್ದಾರ್ ರಾಜು ಫಿರಂಗಿ ಅವರು ಭೂಗಳ್ಳರ ವಿರುದ್ಧ ಕ್ರಮ ಜರುಗಿಸದೆ ಇರುವುದರಿಂದ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಕಾರಣ ಪುರಾತನ ಕಾಲದ ಕೆರೆ ಮಾಯವಾಗೋದು ಗ್ಯಾರಂಟಿ ಎಂದು ರಾಜಲಬಂಡಾ ಗ್ರಾಮದ ಮುಖಂಡ ನಡ್ಡಿ ಭೀಮಣ್ಣ ಆರೋಪಿಸಿದ್ದಾರೆ.ಭೂಗಳ್ಳರ ವಿರುದ್ಧ ರಾಯಚೂರು ಜಿಲ್ಲಾಡಳಿತ ಕ್ರಮ ಜರುಗಿಸದೆ ಹೋದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.