ಕಾರವಾರ : 60 ಜನ ಬೆಡ್ ನಲ್ಲಿದ್ದಾರೆ. ಅವರು ಅರ್ಜಿ ಹಾಕಿಲ್ಲ ಎನ್ನುವ ಬದಲು ಪ್ರತಿಯೊಬ್ಬರಿಗೆ ಸರ್ಕಾರದ ಯೋಜನೆಯ ಲಾಭ ಪಡೆಯುವಂತಾಗಬೇಕು ಈ ಬಗ್ಗೆ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಎಂದು ಉತ್ತರ ಕನ್ನಡ ಜಿಲ್ಲೆಯ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸತೀಶ್ ನಾಯಕ ಹೇಳಿದ್ದಾರೆ ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕರೆದ ಗ್ಯಾರಂಟಿ ಅನುಷ್ಠಾನ ಸಮಿತಿಯನ್ನು ಪ್ರಗತಿ ಪರಿಶೀಲ ಸಭೆಯಲ್ಲಿ ಮಾತನಾಡುತ್ತಿದ್ದರು
ಜಿ.ಎಸ್.ಟಿ ಮತ್ತು ಐ.ಟಿ ರಿಟರ್ನ್ ಮಾಡುವವರ ಬಗ್ಗೆ ಜಿಲ್ಲಾ ಸಮಿತಿ ಸದಸ್ಯರುಗಳು ಸೇರಿ ಬೆಂಗಳೂರಿಗೆ ಹೋಗಿ ದಾಖಲಾತಿ ನೀಡಿ, ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸೋಣ ಎಂದರು.
ಹಾಸಿಗೆಯಲ್ಲಿರುವವರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳ ಜೊತೆಗೆ ಸಮೀತಿ ಸದಸ್ಯರು ಒಂದು ವಿಶೇಷ ಅಭಿಯಾನ ಕೈಗೊಳ್ಳುವ ಮೂಲಕ ಎಲ್ಲಾ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಲೇ ಬೇಕು. ಗ್ರಾ.ಪಂ ವಾರು ಅವರುಗಳ ಮನೆಗೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿ ಎಂದರು. ಸತೀಶ್ ಅವರು ಹೇಳಿದ್ದಾರೆ
ಜಿಲ್ಲೆಯಲ್ಲಿ ವರ್ಷಕ್ಕೆ 7-8 ಸಾವಿರ ಜನ ಪದವಿ ಮುಗಿಸಿ ಹೊರಬೀಳ್ತಾರೆ ಆದರೆ ಈ ವರೆಗೆ 4236 ಜನ ಅರ್ಜಿ ಹಾಕಿದ್ದಾರೆ. ಯುವನಿಧಿ ಯೋಜನೆ ಬಗ್ಗೆ ಹೆಚ್ಚಿನ ಪ್ರಚಾರದ ವ್ಯವಸ್ಥೆ ಆಗಬೇಕಾಗಿದೆ ಎಂದರು. ಈ ಕಾರ್ಯಕ್ರಮ ಎಲ್ಲಾ ತಾಲೂಕುಗಳಲ್ಲಿ, ಕಾಲೇಜ್ ಗಳಲ್ಲಿ ಆಗಬೇಕಾಗಿದೆ ಎಂದರು. ತಾಲೂಕಾ ಸಮಿತಿ ಮೂಲಕ ಹೆಚ್ಚಿನ ಅವೆರ್ ನೆಸ್ ಮೂಡಿಸಲು ಸೂಚಿಸಿದ್ದಾರೆ ಕಾರವಾರ ಹೊನ್ನಾವರ ಭಟ್ಕಳ ಶಿರಸಿ, ಕುಮಟಾ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷರು ಅಧಿಕಾರಿಗಳು ಹಾಜರಿದ್ದರು