ದೇವನಹಳ್ಳಿ : ಸತ್ಯ, ಸರಳತೆ, ಅಹಿಂಸೆ ಗಾಂಧೀಜಿ ನೀಡಿದ ತತ್ವಗಳು. ಸತ್ಯ ಮತ್ತು ಸರಳತೆಯನ್ನು ಗಾಂಧೀಜಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇಂತಹ ಹಲವಾರು ಆದರ್ಶಗಳು ನಮಗೆ ಗಾಂಧೀಜಿಯವರಿಂದ ಸಿಗುತ್ತದೆ ಎಂದು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ.ಪಿ.ಕೃಷ್ಣ ತಿಳಿಸಿದರು.
ದೇವನಹಳ್ಳಿ ತಾಲೂಕು ಚಿಕ್ಕಮರಳಿಯ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಗಾಂಧಿ ಅಧ್ಯಯನ ಕೇಂದ್ರವು “ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ವಾತಂತ್ರ್ಯದ ಹೆಜ್ಜೆಗಳು” ಎನ್ನುವ ವಿಷಯ ಕುರಿತು ನಡೆಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗಾಂಧಿ ಬಗೆಗಿನ ಅಧ್ಯಯನ ಇಂದಿನ ಯುವ ಪೀಳಿಗೆಗೆ ಅಗತ್ಯವಿದ್ದು, ಗಾಂಧೀಜಿ ಸತ್ಯ ಎಂದು ಹೇಳಿರುವುದು ಸುಳ್ಳು ಹೇಳದೆ ಸತ್ಯ ನುಡಿಯಬೇಕು ಎಂಬ ಅರ್ಥ ಮಾತ್ರವಲ್ಲದೆ ಯಾವುದೇ ತಪ್ಪನ್ನು ಮಾಡದೆ ಧೈರ್ಯದಿಂದ ಇರಬೇಕು ಎಂಬುದಾಗಿದೆ. ಅದೇ ರೀತಿ ಅಹಿಂಸೆ ಎಂದರೆ ಇತರರನ್ನು ಹಿಂಸಿಸುವುದನ್ನು ಮಾಡಬಾರದು ಎನ್ನುವುದಕ್ಕಿಂತ ಎಲ್ಲರನ್ನೂ ಪ್ರೀತಿಸು ಎಂಬುದಾಗಿದೆ ಎಂದು ಮನವರಿಕೆ ಮಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಭಜನಾ ಕಾರ್ಯಕ್ರಮದ ಮೂಲಕ ಗಾಂಧೀಜಿಗೆ ನುಡಿ ನಮನ ಸಲ್ಲಿಸಿದರು.
ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಇತರೆ ಕಾಲೇಜು ವಿದ್ಯಾರ್ಥಿಗಳದ ಐಶ್ವರ್ಯ, ಸುಮಯ್ಯ ಸಿದ್ದಿಕಿ, ಭವ್ಯಶ್ರೀ, ವೀಣಾ, ರಿಷಿತಾ ಮುಂತಾದವರಿಗೆ
ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ.ಪಿ.ಕೃಷ್ಣ ಬಹುಮಾನ ವಿತರಿಸಿದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಪ್ರಾಂಶುಪಾಲರಾದ ಡಾ.ಎನ್. ಆನಂದಮ್ಮ, ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕಿ ಎನ್.ಲಕ್ಷ್ಮಿ ದೇವಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ, ದೊಡ್ಡಬಳ್ಳಾಪುರದ ಧಾರ್ಮಿಕ ಚಿಂತಕ ವೀರಭದ್ರಯ್ಯ, ದೇವನಹಳ್ಳಿಯ ಲಯನ್ ಸಂಸ್ಥೆಯ ಪದಾಧಿಕಾರಿ ಮುನಿರಾಜು, ಸಹಾಯಕ ಪ್ರಾಧ್ಯಾಪಕರಾದ ಬಿ.
ವಿ ಶೋಭಾ, ಶ್ವೇತಾ,ಅಭಿಜಿತ್ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.