ದೇವನಹಳ್ಳಿ: ಎಸ್.ಎಲ್.ಎನ್.ಎಸ್ ಭಾರತ್ ಗ್ಯಾಸ್ ಬಳಕೆ ದಾರರಿಗೆ ಪ್ರತಿ ನಿತ್ಯ ಬಳಸುವ ಗ್ಯಾಸ್ ಬಗ್ಗೆ ಮುಂಜಾಗ್ರತಾ ವಹಿಸುವ ಜಾಗೃತಿಸಭೆ ಹಾಗೂ ಮಹಿಳೆಯರಿಗೆ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಇದಕ್ಕೆ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ ಮುಂಜಾಗ್ರತಾ ಅಧಿಕಾರಿ ಸಚಿನ್‌ಮನೆ ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ನೀಡಿದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ನ ಅಧಿಕಾರಿ ಸಚಿನ್‌ಮನೆ ಮಾತನಾಡಿ ಮೂರು ಆಯಿಲ್ ಕಂಪನಿಗಳು ಒಗ್ಗೂಡಿ ದೇವನಹಳ್ಳಿಯಲ್ಲಿ ಗ್ರಾಹಕರಿಗೆ ಅಡುಗೆ ಸ್ಪರ್ದೆ ಏರ್ಪಡಿಸಿದ್ದೇವೆ ಉದ್ದೇಶ ಯಾವುದೇ ಗ್ಯಾಸ್ ಅಪಘಾತಗಳು ಸಂಭವಿಸದಂತೆ ಯಾವ ರೀತಿ ಗ್ಯಾಸ್ ಬಳಕೆ ಮಾಡಬೇಕು. ಎಲ್‌ಪಿಜಿ ಬಳಕೆಯ ಬಗ್ಗೆ ಕಾರ್ಯಗಾರವನ್ನು ನಡೆಸಿದ್ದೇವೆ. ಎಲ್‌ಪಿಜಿ ಬಳಸುವ ಎಲ್ಲಾ ಗ್ರಾಹಕರು ಜಾಗೃತರಾಗಿರಬೇಕು ಎಂದು ತಿಳಿಸಿದರು.
ದೇವನಹಳ್ಳಿ ಎಸ್.ಎಲ್.ಎನ್.ಎಸ್ ಭಾರತ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಶ್ರೀಯಸ್ ಮಾತನಾಡಿ, ಗ್ರಾಹಕರು ಗ್ಯಾಸ್ ಬಳಸುವಾಗ ಸುರಕ್ಷಿತ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಬೇಕು ಮಾರ್ಚ್ ಯಿಂದ ನವೆಂಬರ್ ವರೆಗೆ ಮೆನೆಮೆನೆ ಗ್ಯಾಸ್ ಸಂಬಂದಿತ ಸ್ವಚ್ಚತಾ ಅಭಿಯಾನ ನಡೆಯುತ್ತಿದೆ.
ಮೂರು ತೈಲ ಮಾರುಕಟ್ಟೆ ಕಂಪನಿಗಳಿಂದ ಪ್ರಾರಂಭವಾದ ಮೂಲಭೂತ ಸುರಕ್ಷತಾ ತಪಾಸಣೆ ಅಭಿಯಾನವು ತರಬೇತಿ ಪಡೆದ ಸಿಬ್ಬಂದಿಗಳು ನಡೆಸಿದ ಮನೆ-ಮನೆ ತಪಾಸಣೆಗಳ ಮೂಲಕ 12 ಕೋಟಿ ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಕೆ.ಪಿ.ನಾಗೇಶ್, ತಹಸೀಲ್ದಾರ್ ಗಂಗಾಧರ್, ಎಸ್.ವಿ.ಎಸ್. ಭಾರತ್ ಗ್ಯಾಸ್ ಏಜೆನ್ಸಿ ಮಾಲೀಕ ಯಶವಂತ್, ಸರಸ್ವತಿ ನಾಗೇಶ್, ನರಸಿಂಹ ಗ್ಯಾಸ್ ಏಜೆನ್ಸಿ ಮಾಲೀಕರಾದ ಜೈಲಕ್ಷ್ಮೀ, ಗ್ಯಾಸ್ ವಿತರಕರು, ಕಚೇರಿ ಅಧಿಕಾರಿಗಳು ಗ್ರಾಹಕರು ಇದ್ದರು,
ಅಕ್ಷಯ್.ವಿ, ದೇವನಹಳ್ಳಿ.