ಬಳ್ಳಾರಿ ತಾಲೂಕಿನ ವಣೇನೂರು ಗ್ರಾಮದ ಸಣ್ಣರುದ್ರಪ್ಪ ಇವರ ಜಮೀನಿನಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿದ ನೂಜಿವೀಡು ಸಂಸ್ಥೆಯ ಸಂಧ್ಯ ಭತ್ತದ ತಳಿಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿಯ ತಾಲೂಕಿನ ಕ್ಷೇತ್ರೋತ್ಸವದಲ್ಲಿ ಸಂಸ್ಥೆಯ ಅಧಿಕಾರಿ ಪಿ.ಜಿ ಶಿವಕುಮಾರ್ ರವರು ಸಂಧ್ಯ ಭತ್ತದ ತಳಿಯ ಕುರಿತು ಈ ತಳಿಯು ಹೊಸ ಸಂಶೋಧಿತ ತಳಿಯಾಗಿದ್ದು ಈ ತಳಿಯು ಅಲ್ಪಾವಧಿಯಲ್ಲಿ ಅಂದರೆ 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ.
ಕಡಿಮೆ ಖರ್ಚಿನಲ್ಲಿ ಅತ್ಯಧಿಕ ಇಳುವರಿಯನ್ನು ಪಡೆಯಬಹುದು ಈ ತಳಿಯು ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವುದರಿಂದ ಮುಂಗಾರು ಮತ್ತು ಹಿಂಗಾರಿನಲ್ಲೂ ನಾಟಿ ಮಾಡಬಹುದು. ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಗತಿಪರ ರೈತ ವಿಜಯ್ ಕುಮಾರ್ ರವರು ಸಂಧ್ಯ ತಳಿಯು ರೋಗದ ಸಹಿಷ್ಣುತೆಯನ್ನು ಹೊಂದಿದ್ದು ಔಷಧಿ ಸಿಂಪಡಣೆ ಕೂಡ ಕಡಿಮೆ ಇರುತ್ತದೆ ಮತ್ತು ಭತ್ತದ ಕಾಂಡವು ಬಲಿಷ್ಠ ವಾಗಿರುವುದರಿಂದ ಗಾಳಿ ಮಳೆಗೆ ಬೀಳುವ ಸಂಭವ ಇರುವುದಿಲ್ಲ, ಇತರೆ ತಳಿಗಿಂತ ಶೇಕಡ 20ರಷ್ಟು ಇಳುವರಿಯು ಜಾಸ್ತಿ ಬರುತ್ತದೆ ಎಂದು ರೈತರಿಗೆ ತಿಳಿಸಿದರು. ಈ ಕ್ಷೇತ್ರೋತ್ಸವದಲ್ಲಿ ರಾಜಶೇಖರ್, ಸಾಗರ್ ರೆಡ್ಡಿ, ಏ.ರಾಜ, ರಂಗಾರೆಡ್ಡಿ ಸಂಸ್ಥೆಯ ಹೊನ್ನೂರ್ ವಲಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.