Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeDistrictsYadgirಕ್ರಾಂತಿಕಾರಿ ಭಗತಸಿಂಗ್ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಮಾದರಿ-ಡಾ.ಯಲ್ಲಪ್ಪ

ಕ್ರಾಂತಿಕಾರಿ ಭಗತಸಿಂಗ್ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಮಾದರಿ-ಡಾ.ಯಲ್ಲಪ್ಪ

ಶಹಾಪುರ : ದೇಶದ ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿಕಾರಿ ಭಗತಸಿಂಗ್ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಮಾದರಿ ಎಂದು ಶಹಾಪುರ ದಲ್ಲಿ ತಾಲೂಕ ವೈದ್ಯಾಧಿಕಾರಿಗಳಾದ ಡಾಯಲ್ಲಪ್ಪ ಪಾಟೀಲ ತಿಳಿಸಿದರು.

ಕ್ರಾಂತಿಕಾರಿ ಭಗತಸಿಂಗ್ ಅವರ ತತ್ವ ಆದರ್ಶಗಳು ಯುವ ಸಮುದಾಯಕ್ಕೆ ಮಾದರಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ ಕೀರ್ತಿ ಭಗತ್ ಸಿಂಗ್ ಅವರಿಗೆ ಸಲ್ಲುತ್ತದೆ. ಅವರ ಗಟ್ಟಿತನ ದೇಶಕ್ಕಾಗಿ ಬಲಿದಾನವಾದ ಭಗತ್ ಸಿಂಗ್ ನಮಗೆಲ್ಲ ಪ್ರೇರಣೆಯಾಗಲಿ ಎಂದು ತಾಲೂಕ ವೈದ್ಯಾಧಿಕಾರಿಗಳಾದ ಡಾಯಲ್ಲಪ್ಪ ಪಾಟೀಲ ತಿಳಿಸಿದರು.

ನಗರದ ಸರಕಾರಿ ಬಾಲಕೀಯರ ಪ್ರೌಢ ಶಾಲೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘ (ರಿ) ವತಿಯಿಂದ ಭಗತ್ ಸಿಂಗ್ ಅವರ ೧೧೭ ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಕೇವಲ ವಾಟ್ಸಪ್, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುತ್ತಿದ್ದು, ಮಹಾತ್ಮರ ಜಯಂತಿ ಅಂದು ಅವರ ಭಾವಚಿತ್ರದೊಂದಿಗೆ ತಮ್ಮದೊಂದು ಭಾವಚಿತ್ರವ ಹಾಕಿ ಶುಭಾಯಶ ಕೋರಿದರೆ ಸಾಲದು, ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡಬೇಕಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡಬಾರದೆಂದು ಕಿವಿ ಮಾತು ಹೇಳಿದರು.

ಮತ್ತೋರ್ವ ಅತಿಥಿಗಳಾದ ರೈತ ಸಂಘಟನೆ ಮುಖಂಡ ಚೆನ್ನಪ್ಪ ಆನೇಗುಂದಿ ಮಾತನಾಡಿ ಯುವಶಕ್ತಿ ಪ್ರಜಾಪ್ರಭುತ್ವಕ್ಕೆ ಪೂರಕವಾಗುವ ಕೆಲಸ ಮಾಡಬೇಕಿದೆ. ದೇಶದ ಸ್ವಾತಂತ್ರ‍್ಯಕ್ಕಾಗಿ ತಮ್ಮ ೨೩ ನೇ ವಯಸ್ಸಿನಲ್ಲಿಯೇ ಭಗತ್ ಸಿಂಗ್ ಅವರು ತಮ್ಮ ಪ್ರಾಣಭಯವಿಲ್ಲದೆ ನಗುತ್ತಲೇ ನೇಣಿಗೆ ಕೊರಳೊಡ್ಡಿದ್ದರು. ಅಂತಹ ಮಹಾತ್ಮನಿಗೆ ನಾವೆಲ್ಲರೂ ಕೃತಜ್ಞತೆ ಸಮರ್ಪಿಸುವದು ಅಗತ್ಯವಿದೆ. ಅವರ ಸ್ಪೂರ್ತಿಯಿಂದ ದೇಶದ ಒಳಿತಿಗಾಗಿ ಸಂಘಟಿತರಾಗಿ ಕೆಲಸ ಮಾಡೋಣವೆಂದು ಕರೆ ನೀಡಿದರು. ಇದೇ ಸಂಧರ್ಭದಲ್ಲಿ ಸುಮಾರು ೮೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆಯಿAದ ನೋಟ್‌ಬುಕ್ ವಿತರಣೆ ಮಾಡಲಾಯಿತು. ಪ್ರತಿಭಾವಂತಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಇಂತಹ ಕಾರ್ಯಕ್ರಮ ಆಯೋಜಿಸಿದ ವಿಶ್ವೇಶ್ವರಯ್ಯ ಸಂಘಟನೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಬಾಲರಾಜ, ಮಲ್ಲಿಕಾರ್ಜುನ ಮುದ್ನೂರು, ಈರಣ್ಣ ಹಾದಿಮನಿ, ನಗರಸಭೆ ಸದಸ್ಯರುಗಳಾದ ಶಿವುಕುಮಾರ ತಳವಾರ, ಸತೀಶ ಪಂಚಬಾವಿ, ಉಪಪ್ರಾಂಶುಪಾಲರಾದ ವೆಂಕೋಬ ಪಾಟೀಲ, ರಾಜಶೇಖರ ಪಾಟೀಲ, ಮಾನಪ್ಪ.ಸಿ.ಹಡಪದ, ವೆಂಕಟೇಶ ನಾಯಕ ಆಲ್ದಾಳ, ಮಾಳಪ್ಪ ಯಾದವ, ನಾಗರಾಜ ಇಬ್ರಾಹಿಂಪುರ, ಸಚಿನಕುಮಾರ ನಾಯಕ, ಸಂಸ್ಥೆಯ ಅಧ್ಯಕ್ಷರಾದ ಪ್ರದೀಪ ಅಣಬಿ, ಭೋಜಪ್ಪ ಮುಂಡಾಸ, ಸುನೀಲ ಅಣಬಿ, ಅಂಬ್ರೇಶ ಶಿರವಾಳ, ಸಂಗಮೇಶ್ವರ, ಶರಣು ದಿಗ್ಗಿ, ಪ್ರಕಾಶ ದಿಗ್ಗಿ, ದೇವಪ್ಪ ಇನ್ನಿತರ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!