ದೇಶ ಕಂಡ ಅಪ್ರತಿಮನಾಯಕ ಹತ್ತು ವರ್ಷ ದೇಶದ ಪ್ರಧಾನಿಯಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ದೇಶವನ್ನು ಎತ್ತರಕ್ಕೆ ಕೊಂಡೊಯ್ದು ಪ್ರಾಮಾಣಿಕ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ರವರು ನೆನ್ನೆ ನಿಧನರಾಗಿ ದೇಶಕ್ಕೆ ತುಂಬಲಾರದ ನಷ್ಟ ಉಂಟಾಗಿದ್ದು ಇಂದು ವಿಜಯಪುರ ಪ್ರವಾಸಿ ಮಂದಿರದಲ್ಲಿ ವಿಜಯಪುರ ಟೌನ್ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಸದಸ್ಯ ವಿ.ಮಂಜುನಾಥ್ ಮಾತನಾಡಿ, ವಿಶ್ವದ ನಾಲ್ಕನೆಯ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಿಸಲು ಪ್ರಮುಖರಾಗಿ ಮನಮೋಹನ್ ಸಿಂಗ್ ರವರು ಎಂದರೆ ತಪ್ಪಾಗಲಾರದು, ಜಿ-20 ಸಭೆಗಳಲ್ಲಿ ಹಲವು ದೇಶಗಳು ಡಾ.ಮನಮೋಹನ್ ಸಿಂಗ್ ರವರ ಬಳಿ ಆಗಮಿಸಿ ನಮ್ಮ ದೇಶ ಆರ್ಥಿಕ ಸಂಕಷ್ಟದಲ್ಲಿನ ನಿವಾರಣೆಗಾಗಿ ಸಲಹೆ ಕೇಳಿದ್ದನ್ನು ಸ್ಮರಿಸಬಹುದು. 10 ವರ್ಷಗಳ ಸುಧೀರ್ಘ ಪ್ರಧಾನಿ ಗಳಾಗಿ ದೇಶ ಸೇವೆ ಮಾಡಿದ್ದರು. ಬಡ ಕುಟುಂಬದಿಂದ ಬಂದಿರುವ ಇವರು ಕ್ರಾಂತಿಕಾರಿ ಯೋಜನೆಗಳನ್ನು ನೀಡಿದ ಹೆಗ್ಗಳಿಕೆ ಅವರದ್ದಾಗಿದೆ ಇನ್ನು ಹಲವಾರು ಜನಪರವಾದ ಯೋಜನೆಗಳನ್ನು ತಂದರು ಎಂದು ತಿಳಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ರಾಜಣ್ಣ, ನಾರಾಯಣಸ್ವಾಮಿ, ಮಾಜಿ ಸದಸ್ಯ ಜೆ.ಎನ್.ಶ್ರೀನಿವಸ್, ಎಜಾಜ್, ಗೌಸ್ ಖಾನ್, ಮುಖಂಡರಾದ ಕೃಷ್ಣಪ್ಪ, ವೇಣುಗೋಪಾಲ್, ಫೈಜಲ್, ವಲ್ಲಿಜಾನ್, ರಘು, ಹರೀಶ್, ಇನ್ನು ಹಲವು ಕಾಂಗ್ರೆಸ್ ಮುಖಂಡರು ಇದ್ದರು.