ಉತ್ತರ ಕನ್ನಡ ಜಿಲ್ಲೆಯ ಕುಮಟಾಯುವಾ ಬ್ರಿಗೇಡ್ ವತಿಯಿಂದ ಹೂ ಮಾರುವ ಸುಮಾರು 39 ಹೆಣ್ಣುಮಕ್ಕಳಿಗೆ ಸನ್ಮಾನಿಸುವ ಮೂಲಕ ಅಮ್ಮನಮನ ಎಂಬ ಕಾರ್ಯಕ್ರಮ ನಡೆಯಿತು.
ತಾಲೂಕಿನ ಆರೋಗ್ಯಾಧಿಕಾರಿ ಆಜ್ಞಾ ನಾಯಕ ಮಾತನಾಡಿ ದೇವರು ಹಾಗೂ ಮನುಷ್ಯನ ನಡುವಿನ ಸೇತುವೆಯಾಗಿ ಹೂವು ಮಾರುವವರು ಕೆಲಸ ಮಾಡುತ್ತಿದ್ದು ಗುರುತಿಸಿ ಸನ್ಮಾನಿಸುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು.
ದೇವಾಲಯ ಸಮಿತಿಯ ಉಪಾಧ್ಯಕ್ಷ ಮೂಡ್ಲಗೀರಿ ನಾಯಕ ಹಾಗೂ ಪುರಸಭೆಯ ಸಮುದಾಯ ಸಂಘಟಕರಾದ ಮೀನಾಕ್ಷಿ ಆಚಾರಿ ಕಾರ್ಯಕ್ರಮದ ಕುರಿತು ಹರ್ಷವ್ಯಕ್ತಪಡಿಸಿದರು. ವಿಜಯ ನಾಯಕ ಬರ್ಗಿ ಹೂ ಮಾರುವ ಹೆಣ್ಣುಮಕ್ಕಳಿಗೆ ಎಲ್ಲಾ ಸೀರೆಯನ್ನು ನೀಡಿದರು.
ಯುವಾ ಬ್ರಿಗೇಡ್ ತಾಲೂಕ ಸಂಚಾಲಕರಾದ ಸಚೀನ್ ಭಂಡಾರಿ ಸ್ವಾಗತಿಸಿದರು, ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತುಗಳನಾಡಿದರು, ಗೌರೀಶ ನಾಯ್ಕ ನಿರೂಪಿಸಿದರು, ಸದಸ್ಯರಾದ ರವೀಶ ನಾಯ್ಕ, ಚಿಂದಂಬರ ಅಂಬಿಗ, ಪ್ರಕಾಶ ನಾಯ್ಕ, ಲಕ್ಷ್ಮೀಕಾಂತ ಮುಕ್ರಿ, ಸಂದೀಪ ಮಡಿವಾಳ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದ ಜ್ಯೋತಿನಾಯ್ಕ, ಗಾಯತ್ರಿ ಮಡಿವಾಳ ಇನ್ನಿತರರು ಇದ್ದರು.