ಮಾನ್ವಿ: ಮಾನ್ವಿಯಲ್ಲಿ ಸುಮಾರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಸರಕಾರಿ ಕಚೇರಿಗಳು ನಡೆಯುತ್ತಿದ್ದು,ಸರಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದ್ದು,ಸರಕಾರದ ಅಧಿಕಾರಿಗಳಿಂದಳೆ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಮಾನ್ವಿ ಪಟ್ಟಣದ ತಾಲೂಕು ಪಂಚಾಯತಿ ಹಳೆ ಕಟ್ಟಡದಲ್ಲಿ ಸಮಾಜ ಕಲ್ಯಾಣ ಇಲಾಖೆ,ಪರಿಶಿಷ್ಟ ಪಂಗಡ ಇಲಾಖೆ,ಹಿಂದುಳಿದ ವರ್ಗಗಳ ಕಲ್ಯಾಣ ಇಕಾಖೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸ್ಥಳಾಂತರಿಸಬಹುದಾಗಿತ್ತು.ಆದರೆ ಮಾನ್ವಿಯಲ್ಲಿ ರಾಜಕಾರಣಿಗಳ ಕೃಪಾಶಿರ್ವಾದ ಇರುವುದರಿಂದ ಕಚೇರಿಯನ್ನು ಸ್ಥಳಾಂತರಿಸದೆ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ.
ಶಾಸಕ ಹಂಪಯ್ಯ ನಾಯಕರೆ ಸರಕಾರಕ್ಕೆ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ನಷ್ಟವಾದರು ಸಹ ತಾವು ಮುತುವರ್ಜಿ ವಹಿಸಿ ಸ್ಥಳಾಂತರಿಸುವ ಕೆಲಸ ಮಾಡಿದರೆ ಸರಕಾರಕ್ಕೆ ಹಣ ಉಳಿಸಿದ ಪುಣ್ಯವಾದರು ಬರುತ್ತೆ ಎಂದು ಸಂಘಟನಾಕಾರರ ಒತ್ತಾಯವಾಗಿದೆ.
ವರದಿ:R now ಶಫೀಕ್ ಹುಸೇನ್ ಮಾನವಿ.