Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeRaichurManviಮಾನ್ವಿಯಲ್ಲಿ ಕಳಪೆ ಕಾಮಗಾರಿ ನೆಪದಲ್ಲಿ 50 ಲಕ್ಷ ಲೂಟಿ.

ಮಾನ್ವಿಯಲ್ಲಿ ಕಳಪೆ ಕಾಮಗಾರಿ ನೆಪದಲ್ಲಿ 50 ಲಕ್ಷ ಲೂಟಿ.

ಮಾನ್ವಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಬೇಕು ಎಂದು ಸರಕಾರ ಕೋಟಿಗಟ್ಟಲೆ ಅನುದಾನ ನೀಡುತ್ತೆ.ಆದರೆ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ಕಾಮಗಾರಿ ಕಳಪೆ ಮಾಡಿ ಲೋಕೋಪಯೋಗಿ ಇಲಾಖೆ‌ ಅಭಿಯಂತರರು ಹಾಗು ಗುತ್ತಿಗೆದಾರ ಮೋಹನ ಸೇರಿಕೊಂಡು 50 ಲಕ್ಷ ಲೂಟಿ ಮಾಡುವ ಆರೋಪ ಕೇಳಿ ಬಂದಿದೆ.

2023-24 ನೆ ಸಾಲಿನ ಕೆಕೆಆರ್ ಡಿಬಿ ಯೋಜನೆಯ 50 ಲಕ್ಷ ಅನುದಾನವನ್ನು ಕರಡಿಗುಡ್ಡ ಗ್ರಾಮದ ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಶಾಸಕ ಹಂಪಯ್ಯ ನಾಯಕರು ಅನುದಾನ ನೀಡಿದ್ದರು.ಆದರೆ ಮಾನ್ವಿ ಲೋಕೋಪಯೋಗಿ ಅಭಿಯಂತರ ಮಕ್ಸೂದ್, ಎಇಇ ಸಾಮುವೇಲಪ್ಪ ಗುತ್ತಿಗೆದಾರ ಮೋಹನ ಸೇರಿಕೊಂಡು ಕಳಪೆ ಕಾಮಗಾರಿ ಮಾಡುತ್ತಿದ್ದಾರೆಂದು ರೈತ ಸಂಘದ ಮುಖಂಡ ಹೊಳೆಯಪ್ಪ ಉಟಕನೂರು ಆರೋಪಿಸಿದ್ದಾರೆ.

ಮಾನ್ವಿ ಲೋಕೋಪಯೋಗಿ ಅಭಿಯಂತರರು ಹಾಗು ಗುತ್ತಿಗೆದಾರ ಮೋಹನ ಅವರು ಮಾಡಿದ ಸಿಸಿ ರಸ್ತೆ ಕಾಮಗಾರಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ಸಮಗ್ರವಾಗಿ ತನಿಖೆ ಮಾಡಿ ಗುತ್ತಿಗೆದಾರ ಮೋಹನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.


ವರದಿ: ಶಫೀಕ್ ಹುಸೇನ್ ಮಾನವಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!