Welcome to reportnowtv.in   Click to listen highlighted text! Welcome to reportnowtv.in
Monday, January 13, 2025
HomeSportsಸೂರ್ಯನಿಗೆ ಬೇಕಿದೆ 39 ರನ್‌ – ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಮಿಸ್ಟರ್‌ 360

ಸೂರ್ಯನಿಗೆ ಬೇಕಿದೆ 39 ರನ್‌ – ವಿಶ್ವದಾಖಲೆ ಬರೆಯುವ ಸನಿಹದಲ್ಲಿ ಮಿಸ್ಟರ್‌ 360

ಮುಂಬೈ: ವಿಶ್ವದ ನಂ.2 ಟಿ20 ಬ್ಯಾಟರ್‌ ಎಂದೇ ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

ʻಮಿಸ್ಟರ್‌ 360ʼ ಖ್ಯಾತಿಯ ಸೂರ್ಯಕುಮಾರ್‌ ಯಾದವ್‌ ಈವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 2,461 ರನ್‌ ಸಿಡಿಸಿದ್ದಾರೆ. ಅ.9ರಂದು ಬಾಂಗ್ಲಾದೇಶ ಕ್ರಿಕೆಟ್‌ ತಂಡದ (Bangladesh Cricket) ವಿರುದ್ಧ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ 39 ರನ್‌ ಸಿಡಿಸಿದ್ರೆ, 2,500 ಪೂರೈಸಲಿದ್ದಾರೆ. ಇದನ್ನೂ ಓದಿ: ಕುಸಿಯಲಿದೆಯೇ 24 ಕೋಟಿ ಸರದಾರನ ಮೌಲ್ಯ – 18 ಕೋಟಿ ಪಡೆಯಲು ಪಾಂಡ್ಯ ಅರ್ಹರೇ?

ಇದರೊಂದಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್‌ ಪೂರೈಸಿದ ವಿಶ್ವದ 2ನೇ ಆಟಗಾರ (Fastest Batter) ಎಂಬ ವಿಶೇಷ ಸಾಧನೆಗೆ ಪಾತ್ರರಾಗಲಿದ್ದಾರೆ. 67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕ್‌ ತಂಡದ ನಾಯಕ ಬಾಬರ್‌ ಆಜಂ (Babar Azam) ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೇ ವಿರಾಟ್‌ ಕೊಹ್ಲಿ (Virat Kohli), ಮೊಹಮ್ಮದ್‌ ರಿಜ್ವಾನ್‌, ಆರನ್‌ ಫಿಂಚ್‌, ಮಾರ್ಟಿನ್‌ ಗಪ್ಟಿಲ್‌ ಈ ಸಾಧಕರ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ: ಬೌಲರ್‌ಗಳ ದಾಳಿಗೆ ಬಾಂಗ್ಲಾ ಧೂಳಿಪಟ – ಪಾಂಡ್ಯ ಸೂಪರ್‌ ಸಿಕ್ಸರ್; ಭಾರತಕ್ಕೆ 7 ವಿಕೆಟ್‌ಗಳ ಜಯ

ಅತಿ ವೇಗವಾಗಿ 2,500 ರನ್‌ ಪೂರೈಸಿದ ಬ್ಯಾಟರ್‌
* ಬಾಬರ್‌ ಆಜಂ (ಪಾಕಿಸ್ತಾನ) – 67 ಪಂದ್ಯ
* ವಿರಾಟ್‌ ಕೊಹ್ಲಿ (ಭಾರತ) – 73 ಪಂದ್ಯ
* ಮೊಹಮ್ಮದ್‌ ರಿಜ್ವಾನ್‌ (ಪಾಕಿಸ್ತಾನ) – 76 ಪಂದ್ಯ
* ಆರನ್‌ ಫಿಂಚ್‌ (ಆಸ್ಟ್ರೇಲಿಯಾ) – 78 ಪಂದ್ಯ
* ಮಾರ್ಟಿನ್‌ ಗಪ್ಟಿಲ್‌ (ನ್ಯೂಜಿಲೆಂಡ್)‌ – 86 ಪಂದ್ಯ

ಇದೇ ಅಕ್ಟೋಬರ್‌ 6ರಂದು ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ 14 ಎಸೆತಗಳಲ್ಲಿ 29 ರನ್‌ ಬಾರಿಸಿದ್ದರು. ಇದನ್ನೂ ಓದಿ: ಮಿಸ್ಟರ್‌ 360 ಮೇಲೆ ಆರ್‌ಸಿಬಿ ಕಣ್ಣು – ಈ ಸಲ ಕಪ್‌ ನಮ್ಮದಾಗುತ್ತಾ ಅಂತಿದ್ದಾರೆ ಫ್ಯಾನ್ಸ್‌?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!