Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeEntertainmentನಡೆದೇ ಹೋಯ್ತು ಹಿಂದೆಂದೂ ಆಗಿರದ ಘನಘೋರ ತಪ್ಪು; ಕ್ಯಾಪ್ಟನ್​ ಸೇರಿ ಎಲ್ಲರೂ ನಾಮಿನೇಟ್

ನಡೆದೇ ಹೋಯ್ತು ಹಿಂದೆಂದೂ ಆಗಿರದ ಘನಘೋರ ತಪ್ಪು; ಕ್ಯಾಪ್ಟನ್​ ಸೇರಿ ಎಲ್ಲರೂ ನಾಮಿನೇಟ್

ಬಿಗ್ ಬಾಸ್ ನಾಮಿನೇಷನ್​ಗೆ ಚಟುವಟಿಕೆ ಒಂದನ್ನು ನೀಡಿತ್ತು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆದರು. ಉಳಿದ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಾನಸಾ ಸೇರಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಮನೆ ಶಿಕ್ಷೆಗೆ ಒಳಗಾಗಿದೆ.

‘ಬಿಗ್ ಬಾಸ್’ನಲ್ಲಿ ಅದರದ್ದೇ ಆದ ನಿಯಮಗಳು ಇವೆ. ಈ ನಿಯಮಗಳನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದರಲ್ಲೂ ಕೆಲವು ನಿಯಮಗಳನ್ನು ಸ್ಪರ್ಧಿಗಳು ತಪ್ಪುವಂತಿಲ್ಲ. ಕೆಲವೊಮ್ಮೆ ಸ್ಪರ್ಧಿಗಳು ಗೊತ್ತಿದ್ದೂ ನಿಯಮ ಬ್ರೇಕ್ ಮಾಡುತ್ತಾರೆ. ಈಗ ಬಿಗ್ ಬಾಸ್ ಇತಿಹಾಸದಲ್ಲಿ ನಡೆಯದೇ ಇರುವ ಘನಘೋರ ತಪ್ಪೊಂದು ನಡೆದು ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ದೊಡ್ಮನೆಯವರಿಗೆ ಶಿಕ್ಷೆ ಕೂಡ ಆಗಿದೆ. ಇದರಿಂದ ಮನೆಯಲ್ಲಿ ಅಸಮಾಧಾನದ ಬುಗ್ಗೆ ಎದ್ದಿದೆ.

ಆರಂಭದಲ್ಲಿ ಬಿಗ್ ಬಾಸ್ ನಾಮಿನೇಷನ್​ಗೆ ಚಟುವಟಿಕೆ ಒಂದನ್ನು ನೀಡಿತ್ತು. ಈ ಚಟುವಟಿಕೆಯಲ್ಲಿ ತ್ರಿವಿಕ್ರಂ, ಅನುಷಾ, ಧನರಾಜ್, ಜಗದೀಶ್, ಐಶ್ವರ್ಯಾ, ಮಾನಸಾ ಹಾಗೂ ರಂಜಿತ್ ನಾಮಿನೇಟ್ ಆದರು. ಉಳಿದ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಾನಸಾ ಸೇರಿ ಕೆಲವರು ಮಾಡಿದ ತಪ್ಪಿನಿಂದ ಇಡೀ ಮನೆ ಶಿಕ್ಷೆಗೆ ಒಳಗಾಗಿದೆ. ಎಲ್ಲರೂ ನಾಮಿನೇಟ್ ಮಾಡಿ ಬಿಗ್ ಬಾಸ್ ಆದೇಶ ನೀಡಿದ್ದಾರೆ.

ನಿಯಮಗಳ ಪ್ರಕಾರ ‘ಬಿಗ್ ಬಾಸ್’ನಲ್ಲಿ ಬ್ಲೈಂಡ್ಸ್ ಇಳಿಸಿದಾಗ ಯಾರೂ ಹೊರಗೆ ಇಣುಕಿ ನೋಡುವಂತಿಲ್ಲ. ಇದಕ್ಕೆ ಕಾರಣ ಅಲ್ಲಿ ಟಾಸ್ಕ್​ಗೆ ಸಿದ್ಧತೆ ಮಾಡುತ್ತಾ ಇರಲಾಗುತ್ತದೆ. ಟಾಸ್ಕ್​ ಹೇಗಿರುತ್ತದೆ ಎಂಬುದು ಮೊದಲೇ ಗೊತ್ತಾದರೆ ಸ್ಪರ್ಧಿಗಳು ಮಾನಸಿಕವಾಗಿ ರೆಡಿ ಆಗುತ್ತಾರೆ. ಈ ಕಾರಣದಿಂದ ಇದಕ್ಕೆ ಅನುಮತಿ ಇಲ್ಲ. ಆದರೆ, ಮಾನಸಾ ಸೇರಿದಂತೆ ಕೆಲವರು ಬ್ಲೈಂಡ್ಸ್​ನ ಸರಿಸಿ ಹೊರಗೆ ಇಣುಕಿ ನೋಡಿದ್ದಾರೆ.

ಇದರಿಂದ ಬಿಗ್ ಬಾಸ್ ಸಿಟ್ಟಾದರು. ‘ಬ್ಲೈಂಡ್ಸ್ ಡೌನ್ ಆಗಿದ್ದಾಗ ಆಚೆಗೆ ಇಣುಕಿ ನೋಡುವಂತಿಲ್ಲ ಎಂಬುದು ಮನೆಯ ತುಂಬಾ ಮುಖ್ಯವಾದ ಮೂಲ ನಿಯಮ. ಈಗಷ್ಟೇ ಆ ನಿಯಮವನ್ನು ಕೆಲ ಸದಸ್ಯರು ಉಲ್ಲಂಘಿಸಿದ್ದಾರೆ. ಈ ವಿಚಾರ ಮನೆಯ ಕ್ಯಾಪ್ಟನ್ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಇನ್ನಷ್ಟು ಶೋಚನೀಯ. ನಿಮ್ಮೆಲ್ಲರ ವರ್ತನೆಯಿಂದ ಬಿಗ್ ಬಾಸ್​ಗೆ ನೋವಾಗಿದೆ. ಬಿಗ್ ಬಾಸ್​ನ ಹಾಗೂ ಬಿಗ್ ಬಾಸ್ ನಿಯಮಗಳನ್ನು ಗೌರವಿಸದ ನಿಮಗೆ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ’ ಎಂದು ಆದೇಶ ನೀಡಿದರು.

ಇದನ್ನೂ ಓದಿ: ‘ಕಂಟೆಂಟ್​ಗೋಸ್ಕರ ಲವ್ ಆಗುತ್ತಾ?’; ಪ್ರಶ್ನೆ ಮಾಡಿದ ಬಿಗ್ ಬಾಸ್ ಸ್ಪರ್ಧಿಗಳು

‘ಬಿಗ್ ಬಾಸ್ ಇತಿಹಾಸದಲ್ಲಿ ಯಾವ ಕ್ಯಾಪ್ಟನ್ ಕೂಡ ನಾಮಿನೇಟ್ ಆಗಿರಲಿಲ್ಲ. ಆದರೆ, ಹಂಸ ಅವರೇ ನಿಮ್ಮ ಇಮ್ಯೂನಿಟಿಯನ್ನು ಹಿಂಪಡೆದು ನೇರವಾಗಿ ನಾಮಿನೇಟ್ ಮಾಡಿದ್ದೇವೆ. ಇದು ಇತಿಹಾಸ. ಅಭಿನಂದನೆಗಳು’ ಎಂದು ಬಿಗ್ ಬಾಸ್ ಘೋಷಣೆ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!