ವಿಜಯಪುರ : ಹೋಬಳಿಯ ಹಾರೋಹಳ್ಳಿ ಗ್ರಾಮ ಪಂಚಾಯತಿಯ 2023-24 ನೇ ಸಾಲಿನ ಗ್ರಾಮ ಸಭೆ, ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಸಭೆ ನಡೆಯಿತು.
ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿಯನ್ನು ಉತ್ತಮಗೊಳಿಸಿದ್ದೇವೆ, ಮನಗೆ ಶೌಚಾಲಯ ವ್ಯವಸ್ಥೆ, ಶೇಖಡಾ 25 ರಲ್ಲಿ ಎಸ್ಸಿ ಎಸ್ಟಿ ಜನಾಂಗಕ್ಕೆ ಸಹಾಯ ಧನ , ಶೇಖಡಾ 5 ರಲ್ಲಿ ವಿಶೇಷಚೇತನರಿಗೆ ಸೌಲಭ್ಯ, ಹಾಗೂ ಸಾರ್ವಜನಿಕರು ಕಸವನ್ನು ಎಲ್ಲಂದರಲ್ಲಿ ಹಾಕದೇ ಹಸಿಕಸ ಒಣಕಸವನ್ನು ಬೇರ್ಪಡಿಸಿ ಪಂಚಾಯತಿ ವಾಹನದಲ್ಲೇ ಹಾಕಲು ಅರಿವು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸುಮಾದೇವಿ ತಿಳಿಸಿದರು.
ಹಾರೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 5 ಹಳ್ಳಿಗಳು ಒಳಗೊಂಡಿದ್ದು ಗ್ರಾಮಸಭೆಗೆ ಹಾಜರಾದವರು ಬೆರಳೆಣಿಕೆಯಷ್ಟು ಹಾಗೂ ಕೆಲ ಇಲಾಖಾಧಿಕಾರಿಗಳು ಗೈರಾಜರಾಗಿದ್ದಾರೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಇಂತಹ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸಲು ಸೂಕ್ತ ವೇದಿಕೆಯಾಗಿದೆ ಆದರೆ ಗ್ರಾಮಸ್ಥರು ಮತ್ತು ಅಧಿಕಾರಿಗಳೇ ಇಲ್ಲದಿದ್ದೇ ಸದುಪಯೋಗವಾಗುವುದಾದರೂ ಹೇಗೆ ಇದೆಲ್ಲಾ ಗಮನಿಸಿದರೆ ಕಾಟಾಚಾರಕ್ಕೆ ಮತ್ತು ಸರ್ಕಾರಕ್ಕೆ ನಾವು ಗ್ರಾಮಸಭೆ ಮಾಡಿಸ್ಸೇವೆ ಎಂದು ತೋರ್ಡಿಪಡಿಕೆಗೆ ಮಾಡಿದಂತೆ ಕಾಣುತ್ತಿತ್ತು.