ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅನಂತ್‌ನಾಗ್ (Anantnag) ಜಿಲ್ಲೆಯಲ್ಲಿ ಉಗ್ರರು (Terrorists) ಅಪಹರಿಸಿದ್ದ ಭಾರತೀಯ ಸೇನೆಯ ಇಬ್ಬರು ಯೋಧರಲ್ಲಿ (Indian Soldiers) ಓರ್ವ ಯೋಧ ಶವವಾಗಿ ಪತ್ತೆಯಾಗಿದ್ದಾರೆ. ಯೋಧನ ಮೈಮೇಲೆ ಗುಂಡು ಹಾರಿಸಿರುವ ಗಾಯದ ಗುರುತುಗಳು ಕಂಡುಬಂದಿದ್ದು, ಗುಂಡಿಕ್ಕಿ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಮಂಗಳವಾರ ನಾಪತ್ತೆಯಾಗಿದ್ದ ಟೆರಿಟೋರಿಯಲ್ ಆರ್ಮಿ ಜವಾನ್ ಹಿಲಾಲ್ ಅಹ್ಮದ್ ಭಟ್ ಅವರ ದೇಹವನ್ನು ಅನಂತನಾಗ್‌ನ ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತದೇಹದಲ್ಲಿ ಗುಂಡು ಮತ್ತು ಚಾಕುವಿನಿಂದ ಚುಚ್ಚಿರುವ ಗುರುತುಗಳು ಪತ್ತೆಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಕಾಂಗಿಯಾಗಿ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್‌ಗೆ ಸೋಲು – ಮೈತ್ರಿ ಪಕ್ಷವನ್ನೇ ಟೀಕಿಸಿದ ಶಿವಸೇನೆ
ಇನ್ನು ಉಗ್ರರಿಂದ ಅಪಹರಣಕ್ಕೆ ಒಳಗಾದ ಇಬ್ಬರು ಸೈನಿಕರ ಪೈಕಿ ಓರ್ವ ಸೈನಿಕ ಉಗ್ರರ ಹಿಡಿತದಿಂದ ಪಾರಾಗಿ ತಪ್ಪಿಸಿಕೊಂಡು ಬಂದಿದ್ದಾರೆ. ಭದ್ರತಾ ಪಡೆಗಳು ಈ ಭಾಗದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭ ಮಾಡಿತ್ತು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷರಿಗೆ ಆತ್ಮೀಯ ಸ್ವಾಗತ
ಈ ಕುರಿತು ಭದ್ರತಾ ಪಡೆಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅಪಹರಣವಾಗಿದ್ದ ಇಬ್ಬರು ಸೈನಿಕರು ಟೆರಿಟೋರಿಯಲ್ ಆರ್ಮಿಗೆ ಸೇರಿದ ಯೋಧರು ಎಂದು ಖಚಿತಪಡಿಸಿದೆ. ಈ ಪೈಕಿ ಓರ್ವ ಯೋಧ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ ಎಂದೂ ಭದ್ರತಾ ಪಡೆಗಳು ಮಾಹಿತಿ ನೀಡಿದೆ. ಈ ಭಾಗದಲ್ಲಿ ಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ನಾಪತ್ತೆಯಾಗಿದ್ದ ಮತ್ತೋರ್ವ ಯೋಧನಿಗಾಗಿ ಶೋಧಕಾರ್ಯ ನಡೆಸಿತ್ತು. ಇದನ್ನೂ ಓದಿ: ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿ ಆಯ್ತಾ KSRTC – ಒಂದು ಬಸ್ಸಿಗೆ ತಲಾ 100 ರೂ. ಖರ್ಚು ಮಾಡುವಂತೆ ಸೂಚನೆ