ಚಿಕ್ಕಬಳ್ಳಾಪುರ…
ಚಿಂತಾಮಣಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಯೋಗ ಶಿಕ್ಷಕಿಯನ್ನು ಕಿಡ್ನ್ಯಾಪ್ ಮಾಡಿ ಅರೆಬೆತ್ತಲೆಗೊಳಿಸಿ ಜೀವಂತ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳನ್ನು ಬಂಧಿಸಿದ್ದಾರೆ.
ಡಿಟೆಕ್ಟಿವ್ ಏಜೆನ್ಸಿ ಮಾಲೀಕ ಸತೀಶ್‌ರೆಡ್ಡಿ ಮತ್ತು ಗ್ಯಾಂಗ್ ನಾಗೇಂದ್ರರೆಡ್ಡಿ, ರಮಣಾರೆಡ್ಡಿ, ರವಿಚಂದ್ರ ಎಂಬು ವವರನ್ನು ದಿಬ್ಬೂರಹಳ್ಳಿ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಚನ ಎಂಬ ಯೋಗ ಶಿಕ್ಷಕಿ ಬೆಂಗಳೂರಿನ ಡಿ.ಎಸ್. ಮಾಕ್ಸ್ ಸನ್ವರ್ತ ಅಪಾರ್ಟಮೆಂಟ್ ಒಂದರಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಗಂಡನನ್ನು ಬಿಟ್ಟು ಒಂಟಿ ಯಾಗಿ ವಾಸವಾಗಿದ್ದ ಅರ್ಚನಾ ಗಂಡನ ಸ್ನೇಹಿತ ಸಂತೋಷ ಕುಮಾರ್ ಜೊತೆ ಅಕ್ರಮ ಸಂಪರ್ಕ ಇರಿಸಿಕೊಂಡಿದ್ದರು ಎನ್ನಲಾಗಿದೆ.
ಯೋಗ ಶಿಕ್ಷಕಿ ಅರ್ಚನಾಳನ್ನು ಕೊಲೆ ಮಾಡಲು ಆಕೆಯ ಪ್ರಿಯಕರ ಸಂತೋಷ್‌ಕುಮಾರ್ ಎಂಬಾತನ ಪತ್ನಿ ಬಿಂದು ಎಂಬಾಕೆ ಸುಪಾರಿ ನೀಡಿದ್ದ ಆರೋಪ ಕೇಳಿ ಬಂದಿದೆ. ಸುಪಾರಿ ಪಡೆದಿದ್ದ ಸತೀಶ್‌ರೆಡ್ಡಿ ಮತ್ತು ಗ್ಯಾಂಗ್‌ನಿAದ ಅಕ್ಟೋಬರ್ ೨೩ರಂದು ಯೋಗ ಶಿಕ್ಷಕಿಯನ್ನು ಅಪಹರಿಸಲಾಗಿತ್ತು. ಆಕೆಯನ್ನು ಕಿಡ್ನಾಪ್ ಮಾಡಲು ಕೊಪ್ಪಳದಲ್ಲಿ ಕಾರು ಕದಿದ್ದ ಎನ್ನಲಾಗಿದೆ.
ಈ ಸತೀಶ್‌ರೆಡ್ಡಿ ಯಾರೆಂದರೆ ಈತ ಯೋಗ ಶಿಕ್ಷಕಿ ಬಳಿ ಯೋಗ ಕಲಿಯಲು ಹೋಗುತ್ತಿದ್ದ. ಸತೀಶ್‌ರೆಡ್ಡಿ ಮಾಜಿ ಸೈನಿಕನಾಗಿದ್ದ ಯೋಗ ಶಿಕ್ಷಕಿ ಅರ್ಚನಾಳನ್ನು ಗನ್ ಶೂಟಿಂಗ್ ಮಾಡಲು ಕಲಿಸಿಕೊಡುವುದಾಗಿ ಹೇಳಿ
ದಿಬ್ಬೂರುಹಳ್ಳಿ ಪೊಲಿಸ್ ಠಾಣಾ ವ್ಯಾಪ್ತಿಯ ಧನಮಿಟ್ಟೇನಹಳ್ಳಿ ಬಳಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಆಕೆಯ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಆದರೆ ಶಿಕ್ಷಕಿ ಒಪ್ಪದೇ ಇದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿ ಬಟ್ಟೆ ಯನ್ನು ಕಳಚಿದ ನಂತರ ಮೊಬೈಲ್ ಚಾರ್ಜರ್ ಮೂಲಕ ಆಕೆಯ ಕತ್ತಿಗೆ ಹಾಕಿ ಕೊಲೆಗೆ ಯತ್ನಿಸಲಾಗಿದೆ.
ಆಗ ಶಿಕ್ಷಕಿ ಸತ್ತ ಹೋಗುವಂತೆ ನಟಿಸಿದ್ದಾಳೆ, ಶಿಕ್ಷಕಿ ಸತ್ತು ಹೋದಳೆಂದು ತಿಳಿದು ಅಲ್ಲಿಯೇ ಗುಂಡಿ ತೋಡಿ ಆಕೆಯ ಮೇಲೆ ಸ್ವಲ್ಪ ಮಣ್ಣು, ಮರದ ಕೊಂಬೆಗಳನ್ನು ಹಾಕಿ ಅಲ್ಲಿಂದ ಆರೋಪಿಗಳು ಹೊರಟು ಹೋಗಿದ್ದರು. ಸತ್ತಂತೆ ನಟಿಸಿದ್ದ ಶಿಕ್ಷಕಿ ದುಷ್ಕರ್ಮಿಗಳು ಹೋದ ಬಳಿಕ ಅಕ್ಟೊಬರ್ ೨೪ ರಂದು ಬೆಳಗಿನ ಜಾವ ಗುಂಡಿಯಿAದ ಎದ್ದು ಹೊರ ಬಂದಿದ್ದರು.
ಬಳಿಕ ಶಿಕ್ಷಕಿ ಅರ್ಚನಾ ಸ್ಥಳೀಯ ಗ್ರಾಮಕ್ಕೆ ಹೋಗಿ ಸ್ಥಳೀಯರಿಂದ ಬಟ್ಟೆ ಪಡೆದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಕೊಲೆ ಯತ್ನ, ಅಪಹರಣ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ದೂರು ನೀಡಿದ ದೂರಿನ ಮೇಲೆ ಚಿಂತಾಮಣಿ ಉಪವಿಭಾಗ ವ್ಯಾಪ್ತಿಯ ಡಿವೈಎಸ್‌ಪಿ ಪಿ,ಮರಳೀಧರ್ ರವರು ಜಿಲ್ಲಾ ಎಸ್‌ಪಿ ಕುಶಲ್ ಚೌಕ್ಸೆ ಗಮನಕ್ಕೆ ತಂದು ಅವರ ಸಹಕಾರದೊಂದಿಗೆ ದಿಬ್ಬೂರಹಳ್ಳಿ ಪೊಲೀಸ್ ಅಧಿಕಾರಿಗಳು ಮತ್ತು ತಂಡದೊAದಿಗೆ ಅರೋಪಿ ಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ :ಮೋಹನ್ ಕುಮಾರ್ ಆರ್. ನೌ. ಟಿ ವಿ ಚಿಕ್ಕಬಳ್ಳಾಪುರ..