Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeAgricultureನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

ನಾವು ದಿನನಿತ್ಯ ತಿನ್ನೋ ಅನ್ನ ಎಷ್ಟು ಸೇಫ್? – ಕೃಷಿ ವಿವಿಯಿಂದ ಸ್ಫೋಟಕ ಮಾಹಿತಿ ಬಹಿರಂಗ!

ಕೊಪ್ಪಳ: ಇಂದು ನಾವು ತಿನ್ನೋ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಯೋಚಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಹೌದು, ಸದ್ಯ ಕೃಷಿ ವಿವಿಯ (University of Agriculture) ಅಧಿಕಾರಿಗಳು ಬಹಿರಂಗ ಪಡಿಸಿರುವ ವರದಿಯ ಪ್ರಕಾರ ನಾವು ತಿನ್ನೋ ಅನ್ನವೂ (Rice) ವಿಷವಾಗುತ್ತಿದೆಯಾ ಎಂಬ ಭೀತಿ ಶುರುವಾಗಿದೆ.

ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ಭತ್ತದ ಖಣಜ ಅಂತಲೇ ಪ್ರಸಿದ್ಧಿ. ಇಲ್ಲಿನ ಅಕ್ಕಿ ದೇಶ-ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಕೃಷಿ ವಿವಿಯು ಬಹಿರಂಗ ಪಡಿಸಿರುವ ಮಾಹಿತಿಯೊಂದು ಜನರನ್ನು ಆತಂಕಕ್ಕೀಡು ಮಾಡಿದೆ. ಜೊತೆಗೆ ಅನ್ನದ ರೂಪದಲ್ಲಿ ವಿಷ ನಮ್ಮ ದೇಹ ಸೇರುತ್ತಿದೆಯಾ ಎಂಬ ಭೀತಿ ಶುರುವಾಗಿದೆ. ಇತ್ತಿಚಿನ ದಿನಗಳಲ್ಲಿ ರೈತರು ಹೆಚ್ಚಿನ ಇಳುವರಿಯ ಆಸೆಗಾಗಿ ಹೆಚ್ಚಿನ ಪ್ರಮಾಣದ ರಾಸಾಯನಿಕಗಳ ಬಳಸುತ್ತಿರುವ ಹಿನ್ನೆಲೆ ಅನ್ನವೂ ವಿಷವಾಗಿ ಪರಿಣಮಿಸುತ್ತಿದೆ ಎನ್ನುವಂತಾಗಿದೆ. ಗಂಗಾವತಿ, ಸಿಂಧನೂರು, ಸಿರಗುಪ್ಪ ಭಾಗದಲ್ಲಿ ರೈತರು ಹೆಚ್ಚಿನ ಪ್ರಮಾಣದ ರಾಸಾಯನಿಕ (Chemical) ಬಳಕೆ ಮಾಡುತ್ತಿರುವುದು ಇಷ್ಟೆಲ್ಲಾ ಅನುಮಾನಕ್ಕೆ ಕಾರಣವಾಗಿದೆ. ರಾಸಾಯನಿಕ ಬಳಕೆಯಿಂದ ಭೂಮಿ ಫಲವತ್ತತೆಯನ್ನೂ ಕಳೆದುಕೊಂಡಿದೆ. ಜೊತೆಗೆ ಗ್ರಾಮದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ರೈತರು ಅತಿಯಾದ ರಾಸಾಯನಿಕ ಬಳಕೆಯನ್ನು ನಿಲ್ಲಿಸಬೇಕು ಎಂದು ಕೃಷಿ ವಿಸ್ತಣಾಧಿಕಾರಿ ಎಂ.ವಿ ರವಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಗೂಢವಾಗಿ ನೆಲೆಸಿದ್ದ ಪಾಕ್‌ ದಂಪತಿ; ಬೆಂಗಳೂರಲ್ಲಿದ್ದುಕೊಂಡೇ ಧರ್ಮ ಪ್ರಚಾರ, ಪ್ರಚೋದಕರಾಗಿ ಕೆಲಸ

ಹೆಚ್ಚಿನ ರಾಸಾಯನಿಕ ಬಳಕೆಯಿಂದ ಹಲವು ಹಳ್ಳಿಯ ಜನರಲ್ಲಿ ಕ್ಯಾನ್ಸರ್‌ನಂತಹ ರೋಗಗಳು ಕಾಣಿಸಿಕೊಂಡಿವೆ. ಇದರ ಬಗ್ಗೆ ಜಿಲ್ಲಾಡಳಿತ ವರದಿ ತಯಾರಿಸಿದ್ದು, ಜನರಿಗೆ ರಾಸಾಯನಿಕಗಳಿಂದ ಹಾನಿಯಾಗುತ್ತಿರುವುದು ಬೆಳಕಿಗೆ ಬಂದಿದೆ. ಆದರೆ ಜಿಲ್ಲಾಡಳಿತ ಯಾವುದೇ ವರದಿಯನ್ನು ಬಹಿರಂಗಪಡಿಸಿಲ್ಲ. ಆದರೆ ರೈತರು ಯಥಾಸ್ಥಿತಿ ರಾಸಾಯನಿಕಗಳ ಬಳಕೆಯಲ್ಲಿ ನಿರತರಾಗಿರೋದು ಕಂಡು ಬರುತ್ತಿದೆ. ಸದ್ಯ ಈ ರಾಸಾಯನಿಕ ಬಳಕೆಯ ದುಷ್ಪರಿಣಾಮದ ಬಗ್ಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆ ನಡೆದಿಲ್ಲ: ಪರಮೇಶ್ವರ್

ರೈತರು ಹೆಚ್ಚಿನ ಇಳುವರಿಯ ಉದ್ದೇಶದಿಂದ ರಾಸಾಯನಿಕಗಳ ಮೊರೆ ಹೋಗುತ್ತದ್ದಾರೆ. ಆದರೆ ಜನರಿಗೆ ಹಾನಿ ಉಂಟು ಮಾಡುವ ರಾಸಾಯನಿಕಗಳ ಮಾರಾಟಕ್ಕೆ ಜಿಲ್ಲಾಡಳಿಕ ಬ್ರೇಕ್ ಹಾಕಿ ಮುಂದಾಗುವ ಅನಾಹುತಗಳನ್ನ ತಪ್ಪಿಸಬೇಕಿದೆ. ಇದನ್ನೂ ಓದಿ: BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!