ವಿಜಯಪುರದಲ್ಲಿ ಮಹಾ ನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಸ್ವಾಭಿಮಾನದ ಯುದ್ಧ ಆಚರಿಸಲಾಯಿತು,
ವಿಜಯಪುರದಲ್ಲಿ ಮಹಾ ನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅಭಿಮಾನಿ ಬಳಗದ ವತಿಯಿಂದ 207ನೇ ಭೀಮಾ ಕೋರೆಗಾಂವ್ ವಿಜಯೋತ್ಸವದ ಸ್ವಾಭಿಮಾನದ ಯುದ್ಧ ಆಚರಿಸಲಾಯಿತು,ಅಸ್ಪೃಶ್ಯತೆ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆದಂತಹ ಮಹತ್ವದ ಭೀಮಾ ನದಿಯ ತೀರದಲ್ಲಿ 500 ಮಹರ್ ಸೈನಿಕರು ಮತ್ತು 28000 ಪೇಶ್ವೆಯ ಮರಾಠ ಸೈನಿಕರನ್ನು ಸೋಲಿಸಿ, ಸಮಾನತೆಗಾಗಿ, ಸ್ವಾಭಿಮಾನಕ್ಕಾಗಿ ನಡೆದಂತಹ ಸಾಮಾಜಿಕ ನ್ಯಾಯದ ಮತ್ತು ಸ್ವಾಭಿಮಾನದ ಯುದ್ಧವೇ ಭೀಮಾ ಕೋರೆಗಾವ್ ಸ್ವಾಭಿಮಾನದ ಯುದ್ಧ, ಇದು 1818 ಜನವರಿ 1 ಈ ಯುದ್ಧದಲ್ಲಿ 500 ಜನ ಮಹರ್ ಸೈನಿಕರು ಸಿದ್ದನಾಯಕನ ನೇತೃತ್ವದಲ್ಲಿ ವಿಜಯ ಸಾಧಿಸಿದ ಸಲುವಾಗಿ ಭೀಮ ನದಿಯ ದಡದ ಮೇಲೆ ಇರುವ ಕೊರೆಗಾವ್ ಎಂಬ ಗ್ರಾಮದಲ್ಲಿ ವಿಜಯ ಸ್ತಂಭವನ್ನು ಸ್ಥಾಪಿಸಿದರು, ಮುಂದೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ಮಹಾರ ಸೈನಿಕರ ಇತಿಹಾಸವನ್ನು ತಿಳಿದು, ಸ್ವಾಭಿಮಾನ, ಸಮಾನತೆಗಾಗಿ,ಅಸ್ಪೃಶ್ಯತೆಯ ವಿರುದ್ಧದ ಮೊದಲ ಯುದ್ಧ,ನಮ್ಮ ಹಿರಿಯರ ಸಾಹಸ ಧೈರ್ಯ ಸ್ಪೂರ್ತಿಯ ಈ ಸುದಿನ ಎಂದು ತಿಳಿದು ಎಂದು 1927 ಜನವರಿ 1ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಅನುಯಾಯಿಗಳೊಂದಿಗೆ ಭೀಮ ಕೋರೆಗಾವ್ ವಿಜಯ ಸ್ತಂಭಕ್ಕೆ ವೀರ ನಮನಗಳನ್ನು ಸಲ್ಲಿಸಿ, ಕೋರೆಗಾವದ ಇತಿಹಾಸವನ್ನು ಜಗತ್ತಿಗೆ ತಿಳಿಸಿದರು, ಅದರಂತೆ ಪ್ರತಿ ವರ್ಷವೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮತ್ತು ಅವರ ಅನುಯಾಯಿಗಳು ಜನವರಿ 1ರಂದು ಎಲ್ಲಿದ್ದರೂ ಭೀಮ್ ಕೋರೆಗಾವ್ ವಿಜಯೋತ್ಸವಕ್ಕೆ ಹೋಗಿ ಸಮಾನತೆಗಾಗಿ ಅಸ್ಪೃಶ್ಯತೆಯ ವಿರುದ್ಧದ ಮೊದಲ ಸ್ವಾಭಿಮಾನದ ಯುದ್ಧ ಎಂದು ನಮ್ಮ ಹಿರಿಯರು ಪೂರ್ವಜರ ಸಾಹಸ ಧೈರ್ಯ ಸ್ಪೂರ್ತಿಯ ದಿನವನ್ನು ಶೌರ್ಯದ ದಿನವೆಂದು ಆಚರಿಸುತ್ತಾ ನಡೆದರು,
ಈ ಕಾರ್ಯಕ್ರಮದಲಿ , ಡಾ. ಬಾಬಾಸಾಹೇಬ ಅಂಬೇಡ್ಕರ್ ಯುವ ಬ್ರಿಗೇಡ್ ರಾಜ್ಯ ಅಧ್ಯಕ್ಷ ಶ್ರೀ ವೀರೇಶ್ ವಾಲಿಕಾರ, ಗೌರವ ಅಧ್ಯಕ್ಷರು ಸಚಿನ್ ತಳಕೇರಿ, ಜಿಲ್ಲಾ ಕಾರ್ಯದರ್ಶಿ ಶ್ರೀ ಪರಶುರಾಮ್ ಗುಡಿಮನಿ ಹಾಗೂ ತನು ಪೌಂಡೆಶನ್ ಅಧ್ಯಕ್ಷರು ಶ್ರೀ ವಿಜು ಗೌಡ ಕಾಳಶೆಟ್ಟಿ ಮತ್ತು ಹಿರಿಯರು, ವಕೀಲರು, ಭಾಗವಸಿದರು.