Welcome to reportnowtv.in   Click to listen highlighted text! Welcome to reportnowtv.in
Thursday, December 26, 2024
HomeDistrictsTumakuruಗೊರವನಹಳ್ಳಿಯ ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ, ಲಕ್ಷದೀಪೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ.

ಗೊರವನಹಳ್ಳಿಯ ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ, ಲಕ್ಷದೀಪೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ನೆರವೇರಲಿದೆ.

ತುಮಕೂರು : ಇಂದು ಕಾರ್ತಿಕ ಮಾಸದ ಕಡೆ ಶುಕ್ರವಾರ ಪ್ರಯುಕ್ತ ಗೊರವನಹಳ್ಳಿಯ ಶ್ರೀ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ ಹಾಗೂ ಸಂಜೆ ಲಕ್ಷದೀಪೋತ್ಸವ ಮತ್ತು ಮತ್ತಿನ ಪಲ್ಲಕ್ಕಿ ಉತ್ಸವ ಇಂದು ಅದ್ದೂರಿಯಾಗಿ ನೆರವೇರಲಿದೆ.

ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಖ್ಯಾತಿ ಪಡೆದಿರುವ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯ

ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ಚಾರ್ಟಬಲ್ ಟ್ರಸ್ಟ್ ದೇವಾಲಯದ ಸಿಬ್ಬಂದಿ. ಪೊಲೀಸ್ ಇಲಾಖೆ. ಸಾರ್ವಜನಿಕರ ಸಹ ಯೋಗದೊಂದಿಗೆ. ಗ್ರಾಮ ಪಂಚಾಯತಿ ಸಹಕಾರದೊಂದಿಗೆ ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸಲಾಗಿತು


ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ಲಕ್ಷ ದೀಪೋತ್ಸವದ ಕಾರ್ಯಕ್ರಮದ ಪ್ರಯುಕ್ತ ದೇವಾಲಯಕ್ಕೆ ಹೂವಿನ ಅಲಂಕಾರ. ವಿದ್ಯುತ್ ದೀಪಲಂಕಾರ ಏರ್ಪಡಿಸಲಾಗಿತ್ತು


ಗೊಲ್ಲರಹಟ್ಟಿ ಮತ್ತು ನರಸಯ್ಯನಪಾಳ್ಯ ಗ್ರಾಮಸ್ಥರಿಂದ ಆರತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವಾಲಯದ ಬಲಭಾಗದಲ್ಲಿ ತೀತಾ ಜಲಾಶಯ ಇದ್ದು ಜಲಾಶಯ ಕಳೆದ ಎರಡು ತಿಂಗಳಿಂದ ಜಲಾಶಯ ತುಂಬಿ ಹರಿಯುತ್ತಿದ್ದು ದೇವರಾಯನದುರ್ಗ ತಪ್ಪಲಿನಲ್ಲಿ ಹುಟ್ಟಿ ಜಯ ಮಂಗಲಿ ನದಿ ಪಾತ್ರದ ಏಕೈಕ ಜಲಾಶಯ ಇದಾಗಿದೆ.

ಕೊರಟಗೆರೆ ಕ್ಷೇತ್ರದ ಸಾವಿರಾರು ರೈತರ ಜೀವನಾಡಿ ಆಗಿರುವ ಜಲಾಶಯ ಇದಾಗಿದ್ದು ಜಲಾಶಯ ಮತ್ತು ಕೋಡಿಯ ದೃಶ್ಯ ಸೊಬಗನ್ನು ನೋಡಲು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಾ ಮಲೆನಾಡಿನ ಸೊಬಗನ್ನು ನಾಚಿಸುತ್ತದೆ.

ದೇವಾಲಯದ ಪಕ್ಕದಲ್ಲಿ ಕಮಲಮ್ಮ ಅಜ್ಜಿಯ ದಿವ್ಯ ಬೃಂದಾವನ ಇದ್ದು ಶ್ರೀ ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ಬರುವ ಭಕ್ತರು ಅವರ ಇಷ್ಟಾರ್ಥ ಹರಕೆಯನ್ನು ತೀರಿಸಿ ಪೂಜೆ ಸಲ್ಲಿಸುತ್ತಿರುವುದು ವಿಶೇಷವಾಗಿತ್ತು.

ಕಲ್ಪತರ ನಾಡಿನಲ್ಲಿ ಗೊರವನಹಳ್ಳಿ ಶ್ರೀ ಕ್ಷೇತ್ರ ಪ್ರವಾಸಿಗರ ಆಕರ್ಷಣೀಯ ತಾಣವಾಗಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸಿ ಪೂಜಿ ಸಲ್ಲಿಸುತಿದ್ದಾರೆ

ರಾಜ್ಯದ ಮೂಲೆ ಮೂಲೆಗಳಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಕೊರಟಗೆರೆ (ಫ್ರೆಂಡ್ಸ್ ಗ್ರೂಪ್) ಗೆಳೆಯರ ಬಳಗ ರವಿಕುಮಾರ್ ರವರ ನೇತೃತ್ವದಲ್ಲಿ ಊಟ ಬಡಿಸುವ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಣೆ ವ್ಯವಸ್ಥೆ ಮಾಡಲಾಗಿದೆ . ದೂರದ ಊರುಗಳಿಂದ ಬರುವ ಭಕ್ತರ ವಾಹನ ನಿಲುಗಡೆಗೆ ಗೊರವನಹಳ್ಳಿ ದೇವಾಲಯದ ಟ್ರಸ್ಟ್ ವತಿಯಿಂದ ಸೌಲಭ್ಯ ಕಲ್ಪಿಸಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!