ಹಾಲುಮತ ಸಮಾಜದವರು ಹಾಲಿನಂತ ಮನಸ್ಸು ಎನ್ನುವುದಕ್ಕೆ ಮಾನ್ವಿ ಪಟ್ಟಣದ ನೆರಳು ವೃದ್ಧಾಶ್ರಮದವರಿಗೆ ಹಾಲುಮತ ಸಮಾಜದ ಯುವಕರು ಹಣ್ಣು ಹಂಪಲು ಹಾಗು ಒಂದು ಚೀಲ ಅಕ್ಕಿ ಮೂಟೆ ಕೊಟ್ಟಿರುವುದೆ ಸಾಕ್ಷಿ.
ಕನಕದಾಸ ಜಯಂತಿಯನ್ನು ದೇಶದ ಪ್ರತಿಯೊಬ್ಬರೂ ಆಚರಣೆ ಮಾಡಬೇಕು.ಯಾಕಂದರೆ ಅವರಧಾರೆಗಳನ್ನು ಅಳವಡಿಸಿಕೊಂಡು ನಡೆದಾಗ ಮಾತ್ರ ಮಹಾನ್ ನಾಯಕರಿಗೆ ಕೊಟ್ಟ ಗೌರವ ಎಂದು ಪತ್ರಕರ್ತ ಪರಶುರಾಮ ಚೌಡ್ಕಿ ತಿಳಿಸಿದರು.
ಕನಕದಾಸ ಜಯಂತಿ ಅಂಗವಾಗಿ ಲಿಂಗಯ್ಯ ಮತ್ತಯ ಮುಚಿಗೇರಿ ವೀರೇಶ ಸೇರಿದಂತೆ ಇನ್ನಿತರ ಯುವಕರು ನೊಂದ ಬಡ ಜೀವಿಗಳಿಗೆ ಸಹಾಯ ಮಾಡುವ ಗುಣ ಹೊಂದಿರುವುದು ಶ್ಲಾಘನೀಯ.
ವರದಿ: ಶಫೀಕ್ ಹುಸೇನ್ ಮಾನವಿ