ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಮನೆಯಿಂದ ನಡೆಯುತ್ತೆ ವಿಶೇಷ ಪೂಜೆ
ಮಾನ್ವಿ ಪಟ್ಟಣದ ಬೆಟ್ಟದಗವಿಯಲ್ಲಿರುವ ಅನ್ನಮಯ್ಯ ತಾತನ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಅದ್ಧೂರಿಯಾಗಿ ನಡೆಯಿತು.
ಅನ್ನಮಯ್ಯ ತಾತ ನಂಬಿದ ಭಕ್ತರಿಗೆ ಎಂದೂ ಕೈ ಬಿಡಲ್ಲ ಎಂಬ ಪ್ರತೀತಿ ಇರುವುದರಿಂದ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶದವರೆಗೂ ಭಕ್ತರು ಇರುವುದರಿಂದ ಪೂಜೆ ಸಲ್ಲಿಸಿದರು.
ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರ ಮನೆಯಿಂದ ಅನ್ನಮಯ್ಯ ತಾತನವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರತಿವರ್ಷ ಅನ್ನಸಂತರ್ಪಣೆ ಮಾಡಿಸುತ್ತ ಬಂದಿದ್ದಾರೆ. ಅನ್ನಮಯ್ಯ ತಾತನ ಆಶೀರ್ವಾದ ಪಡೆದರೆ ಸುಖ ನೆಮ್ಮದಿ ದೊರೆಯಲಿದೆ ಎಂದು ಭಕ್ತರು ಹೇಳುವ ಮಾತಿದು.
ವರದಿ: ಶಫೀಕ್ ಹುಸೇನ್ ಮಾನವಿ