ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಗ್ರಂಥವು ಪ್ರತಿಯೊಬ್ಬರಿಗೂ ಕಾನೂನಿನ ಶ್ರೀರಕ್ಷೆ ಇದ್ದ ಹಾಗೆ ಎಂದು ಶಾಸಕ ಹಂಪಯ್ಯ ನಾಯಕ ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜರುಗಿದ 75ನೆ ವರ್ಷದ ಸಂವಿಧಾನ ಉತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಇದ್ದರೆ ನಾವು ಯಾವ ಸ್ಥಿತಿಯಲ್ಲಿ ಇರುತ್ತಿದ್ದೆವು,ಅಂಬೇಡ್ಕರ್ ಅವರ ಸಂವಿಧಾನದಿಂದಲೇ ನಾನು ಶಾಸಕನಾಗಿ ವೇದಿಕೆ ಮೇಲೆ ನಿಂತು ಮಾತನಾಡುವ ಅವಕಾಶ ಸಿಕ್ಕಿದೆ ಎಂದರು.
ಅಂಬೇಡ್ಕರ್ ಅವರು ಬರೆದ ಸಂವಿಧಾನದ ವಿಧಿಗಳನ್ನು ನೋಡಿದರೆ ಎಲ್ಲಾ ಜಾತಿಯ ಜನಾಂಗದವರಿಗೆ ಸಮಾನತೆ,ಭಾತೃತ್ವದ ಬಗ್ಗೆ ತಿಳಿಸಿದ್ದಾರೆಂದು ಶಾಸಕ ಹಂಪಯ್ಯ ನಾಯಕ ಅವರು ಅಂಬೇಡ್ಕರ್ ಅವರನ್ನು ಬಣ್ಣಿಸಿದರು.
ವರದಿ:Amount tv ಶಫೀಕ್ ಹುಸೇನ್ ಮಾನವಿ