ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ನಡೆದ ಉಪ ಚುನಟವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನ್ವಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಗಳೆ ಗೆಲುವಿಗೆ ಕಾರಣ ಎಂದು ಸೈಯದ್ ಖಾಲಿ ಖಾದ್ರಿ ಹಾಗೂ ಬಾಲ್ ಸ್ವಾಮಿ ಕೊಡ್ಲಿ, ಶಿವರಾಜ್ ನಾಯಕ್, ಬಸವಂತಪ್ಪ, ರಾಜ ಸುಭಾಷ್ ಚಂದ್ರ ನಾಯಕ್ ಜಯಘೋಷ ಕೂಗಿದರು. ಬಿಜೆಪಿ ಪಕ್ಷ ಎಷ್ಟೆ ಪ್ರಯತ್ನ ಪಟ್ಟರು ಮತದಾರರು ತಕ್ಕ ಪಾಠ ಕಲಿಸಿದ್ದಾರೆಂದು ಸಂಭ್ರಮಿಸಿದರು.
ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಕರಣದಲ್ಲಿ ಸಿಕ್ಕಿ ಹಾಕಿಸುವ ಕೆಲಸ ಮಾಡಿದರು ಸಹ ಚನ್ನಪಟ್ಟಣ, ಸಂಡೂರು ಹಾಗು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತದಾರರು ಯಾರಿಗೆ ಮತ ನೀಡಬೇಕು ಎಂದು ಆಲೋಚನೆ ಮಾಡಿದ್ದಾರೆಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.