ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯುವ ಬ್ರಿಗೇಡ್ ಹಾಗೂ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜ್ ಗೋರೆ, ಕುಮಟಾ ಸಹಯೋಗದಲ್ಲಿ 200ಕ್ಕೂ ಅಧಿಕ ಯು ವಕರು ಮತ್ತು ಮಹಿಳೆಯರು ಸೇರಿ ಕುಮಟಾದಗೋರೆ ಗೋಪಾಲ ಕೃಷ್ಣ ದೇವಸ್ಥಾನದ ಕಲ್ಯಾಣಿ ಯಲ್ಲಿ ದೀಪೋತ್ಸವ ಕಾರ್ಯಕ್ರಮ ಬಿಜೃಂಬಣೆಯಿಂದ ನಡೆದಿದೆ.
ಕಾರವಾರ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಯುವ ಬ್ರಿಗೇಡ್ ಹಾಗೂ ಕೆನರಾ ಎಕ್ಸಲೆನ್ಸ್ ಪಿ.ಯು ಕಾಲೇಜ್ ಗೋರೆ, ಕುಮಟಾ ಸಹಯೋಗದಲ್ಲಿ 200ಕ್ಕೂ ಅಧಿಕ ಯು ವಕರು ಮತ್ತು ಮಹಿಳೆಯರು ಸೇರಿ ಕುಮಟಾದಗೋರೆ ಗೋಪಾಲ ಕೃಷ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಛತೆ ಹಾಗೂ ಸಂಜೆ ಭಾರತ ಮಾತೆಯ ಮೂರ್ತಿಯನ್ನು ದೋಣಿಯಲ್ಲಿ ಕುಳ್ಳಿಸಿ ದೀಪದ ಅಲಂಕಾರ ಮಾಡಿ ಕಲ್ಯಾಣಿಯ ಮದ್ಯದಲ್ಲಿ ನಿಲ್ಲಿಸಿ ಆರತಿ ಮಾಡುವದರ ಮೂಲಕ ದೀಪೋತ್ಸವ ಕಾರ್ಯಕ್ರಮ ನೇರವೇರಿಸಿದರು. ಅಭಿವೃದ್ಧಿಯ ನೆಪದಲ್ಲಿ ಇಂದು ಅದೇಷ್ಟೋ ಕೆರೆ ಕಟ್ಟೆಗಳು ಮುಚ್ಚಿ ಹೋಗಿದೆ, ದೇವಸ್ಥಾನಗಳಲ್ಲಿ ಅಥವಾ ಹಳ್ಳಿಗಳಲ್ಲಿ ಅಲ್ಲಲ್ಲಿ ಬೆರಳೆಣಿಕೆಯಷ್ಟು ಜಲಮೂಲಗಳು ಉಳಿದುಕೊಂಡಿವೆ.
ಇರುವ ಜಲಮೂಲಗಳನ್ನು ಮುಂದಿನ ತಲೆಮಾರಿಗೆ ಉಳಿಸಿಕೊಂಡು ಹೋಗುವುದು ನಮ್ಮೇಲ್ಲರ ಜವಾಬ್ದಾರಿ. ಆದರೇ ಮೋಜು ಮಸ್ತಿಗಾಗಿ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ ಇನ್ನಿತರೇ ಮಾಲಿನ್ಯಕಾರಕ ವಸ್ತುಗಳನ್ನು ನೀರಿನ ಮೂಲಕ್ಕೆ ಎಸೆಯುವುರರಿಂದ ಅದರ ಪಾವಿತ್ರತೆ ಕೆಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ಯುವಾ ಬ್ರಿಗೇಡ್ ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಕ್ಕಳ್ಳನ್ನು ಮುಖ್ಯ ವಾಹಿನಿಯಲ್ಲಿ ಬಳಸಿಕೊಂಡು ಅವರಲ್ಲಿ ಸ್ವಚ್ಛತೆ ಬಗೆಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ ಎಂದು ಯುವಾ ಬ್ರಿಗೇಡ್ ಕುಮಟಾದ ಸದಸ್ಯರಾದ ಸತೀಶ್ ಪಟಗಾರ ಅಭಿಪ್ರಾಯಪಟ್ಟರು.
ನಮಗೆ ನೆಲ ಜಲ ಹಾಗೂ ಜೀವನವನ್ನೇ ನೀಡಿದ ತಾಯಿ ಭಾರತ ಮಾತೆಗೆ ಕೃತಜ್ಞತೆ ಸಲ್ಲಿಸುವುದು ಪ್ರತಿ ಭಾರತೀಯನ ಆಧ್ಯ ಕರ್ತವ್ಯ. ಯುವಾ ಬ್ರಿಗೇಡ್ ಇಂತಹ ಒಂದು ಸುವರ್ಣ ಅವಕಾಶ ಮತ್ತು ಅದ್ಭುತ ಕಲ್ಪನೆ ಜನ ಮಾನಸದಲ್ಲಿ ಮೂಡಿಸುತ್ತಾ ಬಂದಿದ್ದು ನಿಜಕ್ಕೂ ಅಭಿನಂದನಾರ್ಹ ಸಂಗತಿ ಹಾಗೂ ಇಂತಹ ಉತ್ತಮ ಕಾರ್ಯ ಸಮಾಜದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಲಿ ಎಂದು ಮುಖ್ಯ ಅತಿಥಿ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕುಮಟಾದ ಖ್ಯಾತ ಸ್ತ್ರೀರೋಗ ತಜ್ಞ ಹಾಗೂ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು ಆದ ಡಾ ಜಿ.ಜಿ ಹೆಗಡೆ ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ವಿಭಾಗ ಸಹ ಸಂಚಾಲಕರಾದ ಅಣ್ಣಪ್ಪ ನಾಯಕ್ ಸಂಚಾಲಕರಾದ ಸಚೀನ್ ಭಂಡಾರಿ, ಸದಸ್ಯರಾದ ರವೀಶ ನಾಯ್ಕ , ಚಿದಂಬರ ಅಂಬಿಗ್, ಮದನ್ ಗುನಗ, ಸಂದೀಪ್ ಮಡಿವಾಳ, ಲಕ್ಷ್ಮೀಕಾಂತ ಮುಕ್ರಿ, ವಿನಾಯಕ ಗುನಗ, ಪ್ರಕಾಶ ನಾಯ್ಕ, ವಿಷ್ಣು ಪಟಗಾರ, ಗೌರೀಶ ನಾಯ್ಕ ಹಾಗೂ ಕಾಲೇಜಿನ ಬೋದಕ – ಬೋಧಕೇತರ ಸಿಬ್ಬಂದಿಗಳು ಸ್ಥಳೀಯರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.