ಕಾರವಾರ:ಅಭಿವೃದ್ಧಿಗಾಗಿ ಈ ಕಾರ್ಯಕ್ರಮ ಹೊರತು ಮೋಜು ಮಸ್ತಿಗಲ್ಲ ನಿಮಗೆ ಇಂತಹ ಕಾರ್ಯಕ್ರಮ ಮಾಡುವ ಯೋಗ್ಯತೆ ಇಲ್ಲವಾದರು ವಿರೋಧಿಸುವುದು ನಿಮ್ಮ ಗುಣ ಎಂದು ಸುನೀಲ ನಾಯ್ಕರಿಗೆ ಹೇಳಿಕೆಗೆ ಸಚಿವ ಮಂಕಾಳ ವೈದ್ಯ ತಿರುಗೇಟು ನೀಡಿದ್ದಾರೆ ಅವರು ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ದಲ್ಲಿ
ಶನಿವಾರ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದ 3ನೇ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನ ಕ್ಷೇತ್ರದ ಮೀನುಗಾರರಿಗೆ, ಜನರಿಗೆ ಇದರ ಪ್ರಯೋಜನ ಸಿಗಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರ್ಯಕ್ರಮ ಉದ್ಘಾಟನೆ ಮಾಡಬೇಕಾಗಿತ್ತು ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಉದ್ಘಾಟಿಸಿ ಈ ಭಾಗದ ಮೀನುಗಾರರ ಅಭಿವೃದ್ಧಿಗೆ ಗಂಟೆಗಟ್ಟಲೇ ಚರ್ಚೆಯನ್ನು ನಡೆಸಿ ಸರಕಾರದಿಂದ ಮೀನುಗಾರರಿಗೆ ಉತ್ತಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಲಾಗಿದೆ ಹೇಳಿದ್ದಾರೆ. ಈ ಕಾರ್ಯಕ್ರಮ ಕೇವಲ ಮೀನುಗಾರರಿಗೆ ಮಾತ್ರ ಸೀಮಿತವಾಗಿಲ್ಲ. ನವೆಂಬರ್ 21 ರಂದು ವಿಶ್ವ ಮೀನುಗಾರಿಕಾ ದಿನವೆಂದು ಸರಕಾರವೇ ದಿನವನ್ನು ನಿಗದಿ ಮಾಡಿದೆ. ಈ ದಿನವು ಮೀನುಗಾರರು ಸಂಭ್ರಮಿಸುವ ದಿನ ಹಾಗಾಗಿ ಮನರಂಜನೆ ಕಾರ್ಯಕ್ರಮ ನಡೆಸಿದ್ದೇವೆ.
ಮನರಂಜನೆ ಎಲ್ಲರಿಗೂ ಅವಶ್ಯಕವಾಗಿದೆ. ಈ ವಿಚಾರಕ್ಕೂ ಸಹ ಕೆಲವರು ತಪ್ಪು ಹುಡುಕುವಂತಹ ವಿರೋಧ ಮಾಡುವಂತಹ ಬುದ್ದಿ ಹೊಂದಿದ್ದಾರೆ. ಅಂತಹವರಿಗೆ ಈ ರೀತಿಯ ಕಾರ್ಯಕ್ರಮ ಮಾಡುವ ಯೋಗ್ಯತೆ ಇಲ್ಲವಾಗಿದೆ. ಮೀನುಗಾರರ ಅಭಿವೃದ್ಧಿಗೋಸ್ಕರ ಈ ಕಾರ್ಯಕ್ರಮ ಮಾಡಿದ್ದೇವೆ ಹೊರತು ಮೋಜು ಮಸ್ತಿ ಮಾಡಲಲ್ಲ. ಹಿಂದೆಯಿಂದಲೂ ಸಹ ಮನರಂಜನೆ ನಡೆದುಕೊಂಡು ಬಂದಿದೆ.
ಏನಾದರು ಮಾತನಾಡುಕ್ಕಿಂತ ಮೊದಲು ಯೋಚಿಸಿ ಮಾತನಾಡಿದರೆ ಅವರಿಗೆ ಉತ್ತಮ. ಸಂಕಷ್ಟ ಪರಿಹಾರ ಹಣವನ್ನು ಮೀನುಗಾರರಿಗೆ 4 ವರ್ಷದಲ್ಲಿ 12 ಕೋಟಿ ಹಣ ತಲಾ 6 ಲಕ್ಷ ನೀಡಬೇಕಾಗಿದ್ದು ಅಂದಿನ ಸರಕಾರ ನೀಡಿಲ್ಲ. ನಮ್ಮ ಸರಕಾರ ಬಂದ ಮೇಲೆ 6 ರಿಂದ 8 ಲಕ್ಷ ಏರಿಕೆ ಮಾಡಿದ್ದು, ಅದನ್ನು ಸಹ ಮೀನುಗಾರರಿಗೆ ತಲುಪಿಸಿದ್ದೇನೆ. ಈ ವರ್ಷದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು 10 ಲಕ್ಷ ಹಣವನ್ನು ಘೋಷಣೆ ಮಾಡಿದ್ದು ಮೀನುಗಾರರಿಗೆ ಯಾವುದೇ ಕಷ್ಟ ನಷ್ಟಗಳು ಬಾರದಿರಲಿ ಎಂದು ನಾವೆಲ್ಲ ಪ್ರಾರ್ಥಿಸುತ್ತೇವೆ ಒಂದಾನು ವೇಳೆ ಅವಘಢ ನಡೆದಲ್ಲಿ 24 ಗಂಟೆಯೊಳಗೆ ಹಣ ಅಂತಹ ಕುಟುಂಬಕ್ಕೆ ತಲುಪಲಿದೆ ಹೇಳಿದ್ದಾರೆ.
ಬಿಜೆಪಿ ಅವರದ್ದು ಬೆಳಿಗ್ಗೆಯಿಂದ ವಕ್ಫ ಆಸ್ತಿ, ಬಿಪಿಎಲ್ ಕಾರ್ಡ ರದ್ದು, ಮುಡಾ ಹಗರಣದ ವಿಚಾರದಲ್ಲಿ ರಾಜ್ಯದಲ್ಲಿ ಜನರಿಗೆ ಸುಳ್ಳು ಹೇಳಿ ತಿರುಗಾಡುವ ಬದಲು ಸರಕಾರಕ್ಕೆ ಸಲಹೆ ಕೊಡಿ. ಜನಸಾಮಾನ್ಯರಿಗೆ ಬಡವರಿಗೆ ಅನೂಕೂಲವಾಗುವ ಕೆಲಸ ಮಾಡಿ. ಅರ್ಹತೆ ಇದ್ದು ಬಿಪಿಎಲ್. ಕಾರ್ಡ ರದ್ದಾಗಿದ್ದು ನನ್ನ ಕ್ಷೇತ್ರದಲ್ಲಿ ಇದ್ದರೆ 24 ಗಂಟೆಯೊಳಗೆ ಸರಿ ಪಡಿಸಿಕೊಡುವ ಕೆಲಸ ಮಾಡುತ್ತೇನೆ.
ಬಿಜೆಪಿ ಸರಕಾರದ ಅವಧಿಯಲ್ಲಿ ಮೀನುಗಾರರು ಸಂಕಷ್ಟದಲ್ಲಿದ್ದರು ಇವರು ಏನು ಮಾಡಿದ್ದಾರೆ. ನಮ್ಮ ಅಧಿಕಾರದಲ್ಲಿ ನಾವು ಮಾಡಿದ ಕೆಲಸವನ್ನು ಜನರು ನೆನಪಿಸಿ ಮಾತನಾಡಬೇಕು ಅದು ನಮ್ಮ ಕೆಲಸದ ಸಾರ್ಥಕತೆಯಾಗಲಿದೆ. ನನಗೆ ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ. ನಮ್ಮ ಮೀನುಗಾರಿಕಾ ಇಲಾಖೆಯ ಕಾರ್ಯಕ್ರಮದ ಬಗ್ಗೆ ಭಟ್ಕಳ ಮಾಜಿ ಶಾಸಕರು ಮಾತನಾಡಿದ್ದಾರೆ. ಇವೆಲ್ಲವು ಅವರ ಗಮನಕ್ಕೆ ಇರಲಿ.
ಮೋಜು ಮಸ್ತಿಗಾಗಿ ಕಾರ್ಯಕ್ರಮ ಮಾಡಿಲ್ಲ ಮೀನುಗಾರರ ಏಳಿಗೆ ಸರಕಾರ ರಚಿಸಿದ ಯೋಜನೆಗಳ ಪರಿಚಯದ ಬಗ್ಗೆ ಮೀನುಗಾರರಿಗೆ ತಿಳಿಸಬೇಕು ಅವರೊಂದಿಗೆ ಸರಕಾರ ಇದೆ ಎಂಬ ಭರವಸೆ ನೀಡಿದ್ದೇವೆ.
400 ಕೋಟಿ ರೂ.ಗಳಲ್ಲಿ ಮುರುಡೇಶ್ವರದಲ್ಲಿ ಬಂದರು ನಿರ್ಮಾಣ ಮಾಡಲಿದ್ದೇವೆ. ಇದರಲ್ಲಿ ಒಂದು ಮೀನುಗಾರಿಕೆಯ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಯ ಚಿತ್ತ ಸರಕಾರದಿಂದ ಆಗಿದೆ. ಮೋಜು ಮಸ್ತಿಗೆ ಕೇರಳ, ಗೋವಾ ಹೋಗುವ ನಮ್ಮ ಜಿಲ್ಲೆಯ ಜನರು ಇನ್ನು ಮುಂದೆ ಮುರುಡೇಶ್ವರಕ್ಕೆ ಮೋಜು ಮಸ್ತಿ ಮಾಡಲು ಬರುವಂತಾಗಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಅವರಿಗೆ ತಿರುಗೇಟು ನೀಡಿದ್ದಾರೆ.
ನಿಮ್ಮ ಅವಧಿಯಲ್ಲಿ ತೆಂಗಿನಗುಂಡಿಯ ಬಂದರಿನ ಧಕ್ಕೆ ಕುಸಿದಿದ್ದು ಮಾಜಿ ಶಾಸಕ ಸುನೀಲ ನಾಯ್ಕ ಅವರೇ ನೆನಪಿದೆಯಾ ? ಅದನ್ನು ಸರಿಪಡಿಸುವ ಯೋಗ್ಯತೆನೇ ನಿಮಗೆ ಇಲ್ಲವಾಯಿತು. ಇಂತಹ ಕೆಟ್ಟ ರಾಜಕಾರಣ ಮಾಡುವದನ್ನು ಬಿಟ್ಟು ನಮ್ಮೊಂದಿಗೆ ಸಹಕಾರಿ ನಾವು ಅಭಿವೃದ್ಧಿ ಮಾಡುತ್ತೇವೆ. ನಮ್ಮನ್ನ ನೋಡಿ ಕಲಿಯಿರಿ. ನಿಮ್ಮ ಕೇಂದ್ರದ ಬಿಜೆಪಿ ಸರಕಾರಕ್ಕೆ ನಮ್ಮನ್ನು ಮಾದರಿಯಾಗಿ ಇಟ್ಟುಕೊಳ್ಳಿ. ನಿಮಗೆ ಜನರು ಈಗಾಗಲೇ ಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ. ನನಗೆ ಒಂದು ಲಕ್ಷ ಮತವನ್ನು ಕೊಟ್ಟು ಮಾಜಿ ಶಾಸಕರು ಮರೆದಿದ್ದಾರೆ ಅನ್ನಿಸುತ್ತೆ. ಕ್ಷೇತ್ರದಲ್ಲಿ ಇಂತಹ ಕೆಲಸ ಮಾಡಿ ಎಂದು ಹೇಳಿ ನಾನು ಮಾಡಿ ತೋರಿಸುತ್ತೇನೆ. ಸರಕಾರದಿಂದ ಆಗದ ಕೆಲಸವನ್ನು ನಾನು ನನ್ನ ಸ್ವಂತ ಹಣದಿಂದ ಮಾಡುತ್ತಾ ಬಂದಿದ್ದೇನೆ