ಕಾರವಾರ : ಮೀನುಗಾರಿಕೆಗೆ ತೆರಳಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ – ಡಿಸಿಎಂ ಡಿಕೆ ಶಿವಕುಮಾರ್.ಮೀನುಗಾರಿಕೆಗೆ ತೆರಳಿ ಅಪಾಯಕ್ಕೆ ಸಿಲುಕಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದೆಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.ರೈತ ಭೂಮಿಯಲ್ಲಿ ಕೃಷಿ ಮಾಡುತ್ತಾನೆ ಮೀನುಗಾರರು ಸಮುದ್ರದಲ್ಲಿ ಕೃಷಿ ಮಾಡುತ್ತಾರೆ,

ನಿಮ್ಮನ್ನು ಆರ್ಥಿಕವಾಗಿ ಮೇಲೆತ್ತಬೇಕು, ಮೀನುಗಾರರ ಬದುಕನ್ನು ನನಸು ಮಾಡಬೇಕು ಎಂಬುದು ನಮ್ಮ ಉದ್ದೇಶ, ಈ ಹಿಂದೆ ಮೀನುಗಾರರು ಮೀನುಗಾರಿಕೆ ವೇಳೆ ಮೃತಪಟ್ಟರೆ ಅವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಲಾಗುತ್ತಿತ್ತು

ಅದನ್ನು ನಮ್ಮ ಸರ್ಕಾರ ಬಂದ ಮೇಲೆ 8 ಲಕ್ಷಕ್ಕೆ ಏರಿಸಲಾಗಿತ್ತು, ಇನ್ನು ಮುಂದೆ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಇಲ್ಲಿನ ಜನ ಬುದ್ಧಿವಂತರು ಆದರೆ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ಕಡೆಗೆ ಹೋಗುತ್ತಿದ್ದಾರೆ

ಇದರಿಂದ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಪ್ರವಾಸ ಉದ್ಯಮ ನೀತಿ ತರುತ್ತೇವೆ, ಉಡುಪಿ-ಮಂಗಳೂರು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಂದ ಪ್ರಸ್ತಾಪ ತರಿಸಿಕೊಂಡು ಪ್ರವಾಸೋದ್ಯಮ ಸಚಿವರು ನೀತಿಯ ರೂಪರೇಷೆ ಮಾಡುತ್ತಾರೆ ಎಂದರು ಸಮಾರಂಭದಲ್ಲಿ ಆರ್ ವಿ ದೇಶಪಾಂಡೆ, ಶಿರಸಿ ಶಾಸಕ ಭೀಮಣ್ಣ ನಾಯಕ್, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಮುಂತಾದವರು ಹಾಜರಿದ್ದರು.

ಸುಬ್ರಹ್ಮಣ್ಯ ಭಟ್ ಮದ್ಗುಣಿ ಜಿಲ್ಲಾ ವರದಿಗಾರರು ಕಾರವಾರ