ಆಸ್ಟ್ರೇಲಿಯಾ- ಭಾರತ ನಡುವಿನ 3 ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ದಾಖಲೆ ಈ ವರೆಗೂ ಭಾರತದ ಕ್ರಿಕೆಟ್ ಲೆಜೆಂಡ್ ಅವರ ಹೆಸರಿನಲ್ಲಿತ್ತು. ಈಗ ಕಪಿಲ್ ದೇವ್ ಸಾಧನೆಯನ್ನು ಸರಿಗಟ್ಟಿ ಬುಮ್ರಾ ವಿಶ್ವದಾಖಲೆ ನಿರ್ಮಿಸಿ ಹೆಮ್ಮೆಯ ಭಾರತೀಯ ಬೌಲರ್ ಎನಿಸಿದ್ದಾರೆ.
ಬ್ರಿಸ್ಬೇನ್ ನಲ್ಲಿ ನಡೆದ 3 ನೇ ಟೆಸ್ಟ್ ಪಂದ್ಯದ 2 ನೇ ಇನ್ನಿಂಗ್ಸ್ ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ನೆಲದಲ್ಲಿ ಭಾರತೀಯ ಬೌಲರ್ ಆಗಿ ಬುಮ್ರಾ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. 10 ಪಂದ್ಯಗಳಲ್ಲಿ ಬುಮ್ರಾ 52 ವಿಕೆಟ್ ಗಳನ್ನು ಕಬಳಿಸಿದ್ದು, 17.25 ಸರಾಸರಿ ಹೊಂದಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಕಪಿಲ್ ದೇವ್ 11 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್ ಗಳಿಸಿ 24.58 ಸರಾಸರಿ ಹೊಂದಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ರಲ್ಲಿ ಇನ್ನೂ 2 ಟೆಸ್ಟ್ ಗಳಿರುವುದರಿಂದ ಬುಮ್ರಾಗೆ ಇನ್ನಷ್ಟು ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶ ಇದೆ.