ದೇವನಹಳ್ಳಿ: ವೋಲ್ವೋ ಗ್ರೂಪ್ ಇಂಡಿಯಾ ಟ್ರಸ್ಟ್ ವತಿಯಿಂದ ಸಿ.ಎಸ್.ಆರ್ ಅನುದಾನದಲ್ಲಿ ದೇವನಹಳ್ಳಿ ಪಟ್ಟಣದ 11 ನೇ ವಾರ್ಡ್ ನ ಪರ್ವತಪುರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವ ಕೆ.ಹೆಚ್.ಮುನಿಯಪ್ಪ ಉದ್ಘಾಟಿಸಿದರು.
ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಬಯಲು ಸೀಮೆ ಪ್ರದೇಶವಾದ ಕಾರಣ ನೀರನ್ನು ಬೋರವೆಲ್ ನಿಂದ ನೇರವಾಗಿ ಕುಡಿಯಲು ಯೋಗ್ಯವಲ್ಲದ ಕಾರಣ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ಅಳವಡಿಸಲು ವೋಲ್ವೋ ಕಂಪನಿ ಮುಂದಾಗಿದೆ ಇದೇ ರೀತಿ ದೇವನಹಳ್ಳಿ ಪಟ್ಟಣದಲ್ಲಿ ಎಲ್ಲಿ ಅವಶ್ಯಕತೆ ಇದೆ ಅದನ್ನು ಮುಖಂಡರೊಂದಿಗೆ ಚರ್ಚಿಸಿ ಆ ಭಾಗಗಳಲ್ಲಿ ಅಳವಡಿಸಲು ಕಂಪನಿಮುಂದಾಗಿದೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ವೋಲ್ವೋ ಗ್ರೂಪ್ ನ ಮ್ಯಾನೇಜಿಂಗ್ ಟ್ರಸ್ಟಿ ಜಿ.ವಿ.ಕೆ.ರಾವ್, ಪುರಸಭಾ ಸದಸ್ಯ ಚಂದ್ರಪ್ಪ, ರಘು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಜಗನ್ನಾಥ್, ಬಯಪ್ಪ ಅಧ್ಯಕ್ಷ ಶಾಂತಕುಮಾರ್, ಇನ್ನು ಹಲವು ಮುಖಂಡರು ಇದ್ದರು.