ದೇವನಹಳ್ಳಿ : ಪಟ್ಟಣದ ಹಳೇ ಬಸ್ ನಿಲ್ದಾಣದ ಜೈ ಭುವನೇಶ್ವರಿ ಸಂಘದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮಾಡಲಾಯಿತು.ಜೈ ಭುವನೇಶ್ವರಿ ಕನ್ನಡ ಯುವಕ ಸಂಘ, ಆಟೋ ಮತ್ತು ಕಾರು ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಆಟೋ , ಕಾರು ಚಾಲಕರ ನಾಮಫಲಕ ಅನಾವರಣ ಕಾರ್ಯಕ್ರಮ ನಡೆಯಿತು.
ದಲಿತ ಸಂಘರ್ಷ ಸಮಿತಿ ಭೀಮಶಕ್ತಿ ರಾಜ್ಯ ಸಹ ಕಾರ್ಯದರ್ಶಿ ದಾಸರಬೀದಿ ಮುರಳಿ ನೂತನ ನಾಮ ಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ಆಟೋ ಮತ್ತು ಕಾರು ಮಾಲೀಕರು ಚಾಲಕರು ಒಗ್ಗಟ್ಟಾಗಿ ಕನ್ನಡಾಂಭೆಯ ಸೇವೆ ಮಾಡುತ್ತಿರುವುದು ಶ್ಲಾಘನೀಯ, ಜೈ ಭುವನೇಶ್ವರಿ ಸಂಘದ ಪದಾಧಿಕಾರಿಗಳು ಅನೇಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಹಾಗೂ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬ ಮತ್ತು ಸ್ಮರಣೆಯಂದು ನಿರ್ಗತಿಕರಿಗೆ ಬಡವರಿಗೆ ನಮ್ಮ ಕೈಲಾದ ಕೊಡುಗೆ ಸೇವೆಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಾಡುತ್ತೇವೆ ಇದೇ ರೀತಿ ಎಲ್ಲರೂ ಸಮಾಜಕ್ಕಾಗಿ ಕೊಡುಗೆ ನೀಡುವ ಕಲಸಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಘದ ಅನಿಲ್ ರವರು ಮಾತನಾಡಿ, ಜೈ ಭುವನೇಶ್ವರಿ ಸಂಘಟನೆ ವತಿಯಿಂದ 16 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸುತ್ತಿದ್ದು ಈ ಸಂದರ್ಭದಲ್ಲಿ ಅಣ್ಣಮ್ಮ ದೇವಿ, ದೊಡ್ಡಮ್ಮ ದೇವಿ ಮತ್ತು ಮುನೇಶ್ವರ ಸ್ವಮಿಯವರನ್ನು ಪ್ರತಿಷ್ಠಾಪಿಸ ಪೂಜೆ ಮಾಡಲಾಗುತ್ತಿದೆ ಸಂಜೆ ವಾಹನಗಳ ಅದ್ದೂರಿ ಪೂಜೆ ರಸಮಂಜರಿ ಕಾರ್ಯಕ್ರಮ ಇರುತ್ತದೆ ಎಲ್ಲಾ ಕನ್ನಡದ ಮನಸುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಟಿ.ಓ ಇಲಾಖೆಯ ನಾಗರಾಜ್, ಚಂದ್ರಶೇಖರ್, ರವಿಚಂದ್ರ, ಹಾಗೂ ಸಿಬ್ಬಂದಿ ವರ್ಗ , ಜೈ ಭುವನೇಶ್ವರಿ ಆಟೋ, ಕಾರು, ಟೆಂಪೋ ಮಾಲೀಕರ ಚಾಲಕರ ಸಂಘದ ಪದಾಧಿಕಾರಿಗಳು ಇದ್ದರು.
ಅಕ್ಷಯ್.ವಿ, ದೇವನಹಳ್ಳಿ.