ದೇವನಹಳ್ಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಚುನಾವಣೆ ಹಮ್ಮಿಕೊಳ್ಳಲಾಗಿದ್ದು.ನೂತನ ಅಧ್ಯಕ್ಷರಾಗಿ ಬೂದಿಗೆರೆ ಶ್ರೀನಿವಾಸ ಗೌಡರವರು ಮೂರನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಡಿಸೆಂಬರ್ 15 ರಂದು ತಾಲ್ಲೂಕು ಕೃಷಿಕ ಸಮಾಜಕ್ಕೆ 15 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಅಧ್ಯಕ್ಷರಾಗಿ ಶ್ರೀನಿವಾಸ ಗೌಡ, ಉಪಾಧ್ಯಕ್ಷರಾಗಿ ಹ್ಯಾಡಾಳ ಮಾರೇಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸಾವಕನಹಳ್ಳಿ ಮುನಿರಾಜು, ಖಜಾಂಚಿಯಾಗಿ ಮಂಡಿಬೆಲೆ ದೇವರಾಜ್, ರವರುಗಳು ಅವಿರೋಧವಾಗಿ ಆಯ್ಕೆಯಾದರು ಎಂದು ತಿಳಿಸಿದರು.