ದೇವನಹಳ್ಳಿ: ತಾಲ್ಲೂಕು ಕೃಷಿಕ ಸಮಾಜದ 2025 ರಿಂದ 30 ರವರೆಗೆ 5 ವರ್ಷದ ಅವಧಿಗೆ ನೂತನ ನಿರ್ದೇಶಕರಾಗಿ ಬೂದಿಗೆರೆಯ ಶ್ರೀನಿವಾಸ್ ಗೌಡ , ಎಸ್. ಆರ್. ರವಿಕುಮಾರ್, ಎಸ್. ಪಿ ಮುನಿರಾಜು, ಕೆ.ಎನ್ ಕೃಷ್ಣಮೂರ್ತಿ , ಎಚ್. ಎಮ್ ರವಿಕುಮಾರ್, ಪಿ. ಮಾರೇಗೌಡ, ಸಿ. ಪುರುಷೋತ್ತಮ್ , ಎಂ. ದೇವರಾಜ್, ಪುರುಷೋತ್ತಮ್ ಕುಮಾರ್ , ರಮೇಶ್, ಎನ್ .ಎಸ್. ಸುರೇಶ್, ಆರ್ .ವಿ ಕೊಂಡಪ್ಪ , ಮುನಿರಾಜು, ಡಿ.ಎಸ್.ಮುನಿರಾಜು , ಟಿ .ಮಂಜುನಾಥ್ ಸೇರಿದಂತೆ 15 ಕಾರ್ಯಕಾರಿ ಸಮಿತಿ ಸದಸ್ಯರುಗಳು
ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು ಚುನಾವಣಾಧಿಕಾರಿ ಸುಶೀಲಮ್ಮ ಪ್ರಮಾಣ ಪತ್ರ ನೀಡಿದರು.
ನೂತನ ನಿರ್ದೇಶಕ ಎಸ್.ಪಿ.ಮುನಿರಾಜು ಮಾತನಾಡಿ, ಕಳೆದ ಸುಮಾರು ವರ್ಷಗಳಿಂದ ನ್ಯಾಯಾಲಯದಲ್ಲಿ ಕೇಸು ಇದ್ದು ಅದು ಈಗ ಇತ್ಯರ್ಥವಾದ ಕಾರಣ 15 ಜನ ನಿರ್ದೇಶಕರು ಒಮ್ಮತವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಇದರಲ್ಲಿ ಪಕ್ಷ ಭೇದ ಮರೆತು ರೈತರ ಬಗ್ಗೆ ಕಾಳಜಿ ಹೊಂದಿರುವಂತ ನಿರ್ಸೇಶಕರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 23 ರಂದು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ರೈತ ದಿನಾಚರಣೆಯನ್ನು ದೇವನಹಳ್ಳಿಯ ದೇವರಾಜ ಅರಸು ಭವನದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ನೂತನ ನಿರ್ದೇಶಕ ಹೆಚ್.ಎಂ.ರವಿಕುಮಾರ್ ಮಾತನಾಡಿ, 2009 ರಲ್ಲಿ ಕೃಷಿಕ ಸಮಾಜದಲ್ಲಿ ಅಧಿಕಾರಕ್ಕೆ ಬಂದು ಮೂರು ಅವಧಿ ಯಶಸ್ವಿ ಆಡಳಿತ ನಡೆಸಿದ್ದೇವೆ ಜಿಲ್ಲೆಯಲ್ಲೇ ದೇವನಹಳ್ಳಿ ತಾಲ್ಲೂಕು ಕೃಷಿಕಸಮಾಜ ಮಾದರಿಯಾಗಿದೆ , ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡುತ್ತೇವೆ. ರೈತರು ತಮಗೆ ಯಾವುದೇ ಸೌಲಭ್ಯ ಪಡೆಯಲು ನಮ್ಮ ಎಲ್ಲಾ ನಿರ್ಸೇಶಕರ ಬಳಿಚರ್ಚಿಸಿ ಸೌಲಭ್ಯ ಪಡೆದುಕೊಳ್ಳಬಹುದು ಇದಕ್ಕೆ ಸದಾ ಸಿದ್ದರಿರುತ್ತೇವೆ. ರೈತ ಏಳ್ಗೆಯಾದರೆ ದೇಶ ಏಳ್ಗೆಯಾಗುತ್ತದೆ ಎಂದು ತಿಳಿಸಿದರು.