ಚಿಕ್ಕಬಳ್ಳಾಪುರ : ನಾವು ಶ್ರಮವಹಿಸಿ ಎಷ್ಟೆ ದುಡಿದರೂ, ದೇವರ ಕೃಪೆ ನಮ್ಮ ಮೇಲಿದ್ದರೆ ಮಾತ್ರ ನಾವು ಯಾವುದೆ ಉದ್ಯಮದಲ್ಲಾಗಲಿ ಉದ್ದೇಶಿತ ಗುರಿ ಮುಟ್ಟಲು ಸಾದ್ಯವಾಗುತ್ತದೆ ಎಲ್ಲರಿಗೂ ಸತ್ಯ ನಾರಾಯಣ ಪೂಜೆಯ ಸೌಬಾಗ್ಯ ಕಲ್ಪಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಆಡಳಿತ ಮಂಡಳಿಗೆ ನಾವು ಅಭಾರಿಯಾಗಿದ್ದೇವೆ ಎಂದು ಸಮಾಜ ಸೇವಕ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಹೊರ ವಲಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯಿಂದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ ಹಮ್ಮಿಕೊಳ್ಳಲಾಗಿತ್ತು.ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ ಬಹುತೇಕ ಗ್ರಾಮೀಣ ಬಾಗದ ಹೆಣ್ಣು ಮಕ್ಕಳು ಬಾಗವಹಿಸಿ ಶ್ರದ್ದಾಭಕ್ತಿಯಿಂದ ಪಾಲ್ಗೊಂಡಿದ್ದರು.
ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪರೆಡ್ಡಿ ಮಾತನಾಡಿ ನಾವು ಎಷ್ಟೆ ಶ್ರಮವಹಿಸಿ ಬೆವರು ಸುರಿಸಿ ದುಡಿದರೂ ದೇವರ ಕೃಪೆ ನಮ್ಮ ಮೇಲೆ ಇರಬೇಕು ಆಗ ಮಾತ್ರ ನಾವು ಗುರಿಮುಟ್ಟಲು ಸಾದ್ಯ ಅಂತಹ ಅವಕಾಶ ಕಲ್ಪಿಸಿದ ಎಸ್ ಕೆ ಡಿ ಆರ್ ಡಿ ಪಿ ಸಂಸ್ತೆ ಆಯೋಜಿಸಿದ ಈ ಕಾರ್ಯಕ್ರಮವೂ ಎಲ್ಲರಿಗೂ ಓಳ್ಳೆಯದನ್ನ ಮಾಡುವ ಕಾರ್ಯಕ್ರಮವಾಗಿದೆ ಎಂದರು
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯರೆಡ್ಡಿ ಮಾತನಾಡಿ ಎಷ್ಟೊ ಜನ ಬಡವರು ಸಾಮಾನ್ಯರು ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಬೇಕೆಂದು ಆಸೆ ಹೊಂದಿರುತ್ತಾರೆ,
ಎಲ್ಲರು ಪೂಜೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿರುವುದು ತುಂಬಾ ಸಂತೋಷದ ವಿಷಯ ಎಂದರು, ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಎಂ ಜಯರಾಮ್,ಜನಸೇನಾ ರೈತಸಂಘದ ಅಧ್ಯಕ್ಷೆ ಸುಷ್ಮಾಶ್ರೀನಿವಾಸ್,ಗ್ರಾಮಾಭಿವೃದ್ದಿ ಯೋಜನಾದಿಕಾರಿ ಧನಂಜಯ್ ಇತರೆ ಸಿಬ್ಬಂದಿ ವರ್ಗ ಬಾಗವಹಿಸಿದ್ದರು.