ಚಿಕ್ಕಬಳ್ಳಾಪುರ: ರೈತನಾಯಕ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಯಲುವಳ್ಳಿ ರಮೇಶ್ ಅಭಿಮಾನಿಗಳಿಂದ ಉಚಿತ ಅನ್ನಧಾನ ಸೇವೆ ಪ್ರಾರಂಭಿಸಿ 6 ತಿಂಗಳ ಕಳೆದ ಹಿನ್ನೆಲೆ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೂಲಿ ಕಾರ್ಮಿಕರು ಹಮಾಲಿಗಳಿಗೆ ಎಪಿಎಂಸಿ ಮಾರುಕಟ್ಟೆಗೆ ಬರುವ ರೈತರಿಗೆ ಉಚಿತ ಅನ್ನಧಾನ ಸೇವೆ ಪ್ರಾರಂಬಿಂಸಿ ಇಂದಿಗೆ ಆರುತಿಂಗಳು ಕಳೆದಿದೆ ಅವರ ಅನ್ನಧಾನ ಸೇವೆಯನ್ನ ಊಟ ಮಾಡುವ ಪ್ರತಿಯೋಬ್ಬರು ಯಾರು ಎಷ್ಟೆ ಬಹುಮಾನ ಕೊಟ್ಟರು ಉಳಿಯೊಲ್ಲ ಹಸಿವು ನೀಗಿಸಿದ ವ್ಯಕ್ತಿ ಚಿರಕಾಲವಿರಲಿ ಎಂದು ಸ್ಮರಿಸುತಿದ್ದಾರೆ
ಚಿಕ್ಕಬಳ್ಳಾಪುರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಹಮಾಲಿಗಳು ಕೂಲಿ ಕಾರ್ಮಿಕರು ಹಾಗು ತರಕಾರಿ ಹೂವು ತರುವ ರೈತರಿಗೂ ಉಚಿತ ಊಟದ ಸೇವೆಯನ್ನ ಹಿರಿಯ ಕಾಂಗ್ರೇಸ್ ಮುಖಂಡ ಯಲುವಳ್ಳಿ ರಮೇಶ್ ಅಭಿಮಾನಿಗಳ ಬಳಗದಿಂದ ಪ್ರಾರಂಬಿಸಿ 6 ತಿಂಗಳಾಗಿದೆ. ಉಚಿತ ಅನ್ನಧಾನ ಸೇವೆಗೆ ಯಲುವಳ್ಳಿ ರಮೇಶ್ ಮತ್ತು ಅವರ ಕುಟುಂಬ ಹಾಜರಾಗಿ ಸರತಿ ಸಾಲಿನಲ್ಲಿ ನಿಂತು ಊಟ ಮಾಡುತಿದ್ದ ಜನರನ್ನ ನೋಡಿ ಸಂತಸ ಪಟ್ಟರು ಈ ವೇಳೆ ಪ್ರತಿಕ್ರಿಯೆ ನೀಡಿದ ಕುಟುಂಬಸ್ಥರು, ಎಷ್ಟು ದಿನಗಳ ಕಾಲ ಈ ಸೇವೆಯನ್ನ ಮುಂದುವರೆಸಬೇಕೆಂದಿದ್ದಾರೆ ಅಷ್ಟು ದಿನವೂ ನಾವು ಜತೆಗೆ ನಿಂತು ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ, ಅನ್ನಧಾನ ಕಾರ್ಯಕ್ರಮಕ್ಕೆ ಮುಂದುವರೆಸುವುದಾಗಿ ತಿಳಿಸಿದರು.
ಕಳೆದ ಆರು ತಿಂಗಳಿಂದ ವಾರಕ್ಕೆರಡು ದಿನ ಊಟ ಮಾಡುತ್ತಿರುವ ಕೂಲಿ ಕಾರ್ಮಿಕ ಎಷ್ಟೊಂದು ಸಂತೋಷ ಪಟ್ಟಿದ್ದಾರೆ ಈ ಊಟದಿಂದ ಅವರ ಸಂಪಾದನೆ ಎಷ್ಟು ಹೆಚ್ಚಾಗಿದೆ ಆರೋಗ್ಯ ಹೇಗೆ ಸುಧಾರಿಸಿದೆ ಎನ್ನುವುದನ್ನ ಹೀಗೆ ವಿವರಿಸಿದ್ದಾರೆ ನೋಡಿ
ಇನ್ನು ಉಚಿತ ಅನ್ನಧಾನ ಪ್ರಾರಂಭ ಮಾಡಿದಾಗಿನಿಂದ ಜತೆಗೆ ನಿಂತು ಉಟ ಬಡಿಸಿ ತಾನು ಊಟ ಮಾಡಿ ತನ್ನ ಕೈಲಾದ ಸೇವೆಯನ್ನ ನಡೆಸಿಕೊಂಡು ಬರುತ್ತಿರುವ ಎಸ್ ವಿ ಟಿ ಮಂಡಿ ವ್ಯಾಪಾರಿ ಸುರೇಶ್ ರಮೇಶಣ್ಣ ಬದುಕಿರುವವರೆಗೂ ಈ ಅನ್ನಧಾನ ಸೇವೆಯನ್ನ ಕಾರ್ಮಿಕರು ರೈತರು ಮರೆಯೋದಿಲ್ಲ ಎನು ಕೊಟ್ಟರೂ ಜನ ಮರೆತು ಹೋಗ್ತಾರೆ ಆದ್ರೆ ಹಸಿದ ಹೊಟ್ಟೆಗೆ ಕೊಟ್ಟ ಊಟದ ಕೃತಜ್ಞತೆಯನ್ನ ಮಾತ್ರ ಮರೆಯೋದಿಲ್ಲ ಎಂದು ಯಲುವಳ್ಳಿ ರಮೇಶ್ ಅಭಿಮಾನಿಗಳ ಪರವಾಗಿ ತಿಳಿಸಿದರು.
ಈ ವೇಳೆ ರಮೇಶ್ ಅಭಿಮಾನಿಗಳು ವಿನೋದ್,ಶಿವರಾಮ್,ಜನಾರ್ದನ್,ಚಂದ್ರಪ್ಪ,ಲಕ್ಷ್ಮಣ್ ಇತರರು ಜತೆಗಿದ್ದರು