ಚಿಕ್ಕಬಳ್ಳಾಪುರ : ಸುಪ್ರೀಂ ಕೋರ್ಟ್ ಆದೇಶದಂತೆ ಮಾಧಿಗ ಜನಾಂಗಕ್ಕೆ ಪ್ರತ್ಯೇಕ ಒಳ ಮೀಸಲಾತಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಬೆಳಗಾಂ ಅಧಿವೇಶನದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಂತ ಶಾಸಕರ ಮನೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಅದರ ಬಾಗವಾಗಿ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮನೆ ಮುಂದೆ ಹೋರಾಟ ನಡೆಸಿದ ದಲಿತ ಕಾರ್ಯಕರ್ತರು ಅವರ ಮನೆಯಲ್ಲೆ ತಿಂಡಿ ತಿಂದು ಕಾಫಿ ಕುಡಿದು ಇದೊಂದು ಸಾಂಕೇತಿಕ ಹೋರಾಟ ಎಂದು ಸೌಹಾರ್ದತಾ ಪ್ರತಿಭಟನೆ ಮಾಡಿದರು.
ಇಂದು ದಲಿತ ಸಂಘರ್ಷ ಸಮಿತಿ ಹಾಗು ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ರಾಜ್ಯದೆಲ್ಲಡೆ ಓಳಮೀಸಲಾತಿ ಜಾರಿಗೊಳಿಸಲು ಸದನದಲ್ಲಿ ಚರ್ಚಿಸುವಂತೆ ಶಾಸಕರ ಮನೆ ಮುಂದೆ ತಮಟೆ ಚಳುವಳಿ ಹಮ್ಮಿಕೊಂಡಿದ್ದರು
ಅದರ ಭಾಗವಾಗಿ ಚಿಕ್ಕಬಳ್ಳಾಪುರ ನಗರದ ಕಂದವಾರ ರಸ್ತೆಯಲ್ಲಿರುವ ಶಾಸಕರ ಮನೆ ಮುಂದೆ ಸಂಚಾಲಕ ಬಾಲಕುಂಟಹಳ್ಳಿ ಗಂಗಾದರ್ ನಾಯಕತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು
ಈ ವೇಳೆ ಶಾಸಕರ ಮನೆಗೆ ಯಾವುದೆ ರೀತಿಯ ಹಾನಿ ಆಗದಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಕಣ್ಗಾವಲಿನಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ವೇಳೆ ಮಾದಿಗ ಮೀಸಲಾತಿಗೆ ಸುಪ್ರೀಂ ಕೋರ್ಟ ಒಪ್ಪಿಗೆ ನೀಡಿದೆ ಅದರಂತೆ ಆಯಾ ರಾಜ್ಯಗಳು ಮೀಸಲಾತಿ ತೀರ್ಮಾನ ತೆಗೆದುಕೊಳ್ಳಲು ಅಧಿಕಾರ ನೀಡಿದೆ
ಅದೆ ಮಾಧರಿಯಲ್ಲಿ ಕರ್ನಾಟಕ ರಾಜ್ಯ ಇನ್ನೂ ಜಾರಿ ಮಾಡಿಲ್ಲ ಮಾಧಿಗರ ಮತಗಳು ಮಾತ್ರ ಕಾಂಗ್ರೇಸ್ ಸರ್ಕಾರಕ್ಕೆ ಬೇಕಿತ್ತು ಆದ್ರೆ ಮೀಸಲಾತಿ ಜಾರಿ ಮಾಡುವಾಗ ಯಾಕೆ ಸಿಎ ಸಿದ್ದರಾಮಯ್ಯ ಡಿಸಿಎಂ ಶಿವಕುಮಾರ್ ತಾರತಮ್ಯ ವೆಸಗುತಿದ್ದಾರೆ
ಎಂದು ಸಂಚಾಲಕ ಬಾಲಕುಂಟಹಳ್ಳಿ ಗಂಗಾದರ್ ಆರೋಪಿಸಿದರು.ನಂತರ ಪ್ರದೀಪ್ ಈಶ್ವರ್ ಸಹೋದರ್ ಚೇತನ್ ಹಾಗು ಕೆಲವು ಕಾಂಗ್ರೇಸ್ ಮುಖಂಡರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಶಾಸಕರ ಮನೆಗೆ ತೆರಳಿದ್ದ ಡಿ ಎಸ್ ಎಸ್ ಕಾರ್ಯಕರ್ತರು ಶಾಸಕರ ಮನೆಯಲ್ಲಿ ನೀಡಿದ ತಿಂಡಿ ತಿಂದು ಕಾಫಿ ಕುಡಿದು ಇದು ಕೇವಲ ಸಾಂಕೇತಿಕ ಹೋರಾಟವಷ್ಟೆ ಶಾಸಕರ ವಿರುದ್ದ ನಮಗೆ ಯಾವುದೆ ತಕರಾರಿಲ್ಲ ಎನ್ನುವ ಸಂದೇಶವನ್ನ ಸಾರುವಂತೆ ಮಾಡಿದರು.
ಈ ವೇಳೆ ಜಿಲ್ಲಾಧ್ಯಕ್ಷ ಮಂಜುತುಳಸಿ,ಮಂಚೇನಹಳ್ಳಿ ಶ್ರೀನಿವಾಸ್,ಮುನಿಕೃಷ್ಣಪ್ಪ,ಮುನಿರಾಜು,ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಳಪ್ಪ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ವೇಣುಗೋಪಾಲ್, ಮುನಿಕೃಷ್ಣ,ನರಸಿಂಹ, ರಮೇಶ್, ಗೋವಿಂದಪ್ಪ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸುರೇಶ್ ವಿ. ಇತರರು ಜತೆಗಿದ್ದರು.