ಕರ್ನಾಟಕ ರಾಜ್ಯ ರೈತ ಸಂಘದಿಂದ ಮುಂಡರಗಿ ಮಾರುಕಟ್ಟೆಗೆ ಬೀಗ ಹಾಕಿ ಪ್ರತಿಭಟಿಸಿದ ರೈತರು.
ಕೃಷಿ ಮಾರುಕಟ್ಟೆಗೆ ಬರುವ ರೈತರಿಗೆ ಮತ್ತು ಸಾರ್ವಜನಿಕರಿಗೆ ಕೂಲಿಕಾರರಿಗೆ ನೀರಿನ ವ್ಯವಸ್ಥೆ ಮಾಡಬೇಕು ಜೊತೆಗೆ ಅಲ್ಲಿಗೆ ಬರುವ ರೈತರಿಗೆ ಸಾರ್ವಜನಿಕರಿಗೆ ವಿಶ್ರಾಂತಿ ಭವನ ನಿರ್ಮಿಸಬೇಕು ಹಾಗೂ ರಾತ್ರಿ ವೇಳೆ ರೈತರಿಗೆ ವಸತಿ ಸೌಲಭ್ಯ ಮತ್ತು ವಿದ್ಯುತ್ ಬಲ್ಬ್ ಹಾಕಿ ಬೆಳಕಿನ ವ್ಯವಸ್ಥೆ ಮಾಡಬೇಕು ಜೊತೆಗೆ ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು
ಎಂದು ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ್ ಇಟಗಿಯವರು ರಾಜ್ಯದಲ್ಲಿ ಗದಗ್ ಜಿಲ್ಲೆಯ ಮುಂಡರಗಿ ಮಾರುಕಟ್ಟೆ ಹೆಚ್ಚು ಉತ್ಪನ್ನವನ್ನು ಕಳಿಸಿಕೊಡುತ್ತಿದ್ದು ಇಲ್ಲಿ ಬರುವಂತಹ ರೈತರಿಗೆ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಾತ್ರಿ ವೇಳೆ ಅಪಘಾತ ಸಂಭವಿಸದಂತೆ ತಡೆಯಲು ಬೆಳಕಿನ ವ್ಯವಸ್ಥೆ ಹಾಗೂ ರೈತರಿಗೆ ವಿಶ್ರಾಂತಿ ಗ್ರಹವನ್ನು ನೀಡುವಂತೆ ಈಗಾಗಲೇ ಸಾಕಷ್ಟು ಬಾರಿ ಮನವಿ ಮಾಡಿದರು ಕೂಡ ಸ್ಪಂದಿಸುತ್ತಿಲ್ಲ ಶೀಘ್ರವೇ ರೈತ
ಈ ಎಲ್ಲ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ಮತ್ತೆ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು ಈ ಸಂದರ್ಭದಲ್ಲಿ ಚಂದ್ರಕಾಂತ್ ಉಳ್ಳಾಗಡ್ಡಿ. ರಾಘವೇಂದ್ರ ಕುರಿ. ಈರಣ್ಣ ಗಡಾದ. ಹುಚ್ಚಪ್ಪ ಹಂದ್ರಾಳ. ಅಂದಪ್ಪ ಕುರಿ ಪ್ರಕಾಶ್ ದಳವಾಯಿ ಮುಂತಾದ ರೈತರು ಉಪಸ್ಥಿತರಿದ್ದರು