Welcome to reportnowtv.in   Click to listen highlighted text! Welcome to reportnowtv.in
Monday, December 2, 2024
HomeDistrictsBengaluru Ruralದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಾಸ ಶ್ರೇಷ್ಠ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮ.

ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಾಸ ಶ್ರೇಷ್ಠ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮ.

ದೇವನಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ದಾಸ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ, ದೇವನಹಳ್ಳಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತಿ ಸಹಯೋಗದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮವು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನಕದಾಸರ ಬಾವಚಿತ್ರವನ್ನು ಅಲಂಕೃತ ವಾಹನದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ವೇದಿಕೆಯಲ್ಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಅಭಿನಂದನೆ ಸಲ್ಲಿಸಲಾಯಿತು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, 12 ನೇ ಶತಮಾನದ ಬಸವಣ್ಣನವರ ವಚನಗಳನ್ನು ಇಂದಿಗೂ ಪ್ರಸ್ತುತ ಸಮಾಜವನ್ನು ಕಣ್ತೆರೆಸಿ ಸಮಾನತೆಯನ್ನು ಸಾರಿದ ಮಹಾನ್ ವ್ಯಕ್ತಿಗಳಲ್ಲಿ ದಾಸ ಶ್ರೇಷ್ಠ ಕನಕದಾಸರು ಒಬ್ಬರು, ಕುಡಿಯುವ ನೀರು, ಗಾಳಿ, ಸೇವಿಸುವ ಆಹಾರ ಒಂದೇ ಆದರೆ ಜಾತಿ ಎಂಬ ಪಿಡುಗನ್ನು ಮಾತ್ರ ಹೊಗಲಾಡಿಸಲು ಹರಸಾಹಸ ಪಟ್ಟರು. ಸಮಾಜದ ಒಳಿತಿಗಾಗಿ ಅವರು ಮಾಡಿದ ಸೇವೆ ಕಂಡು ಕಾಗಿನೆಲೆಯಲ್ಲಿ ಅವರ ಗದ್ದುಗೆ ಕೂಡ ನಿರ್ಮಿಸಲಾಗಿದೆ.ಕಾಗಿನೆಲೆ ಆದಿಕೇಶವನ ಅಂಕಿತನಾಮದಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದು ತಿಳಿಸಿದರು.
ಬೈಟ್: ಮುನಿಯಪ್ಪ.

ಜಿಲ್ಲಾಧಿಕಾರಿ ಡಾ.ಶಿವಶಂಕರ್ ಮಾತನಾಡಿ, ದಾಸಶ್ರೇಷ್ಟರು ಭಗವಂತನಾದ ಶ್ರೀ ಕೃಷ್ಣನನ್ನು ಒಲಿಸಿಕೊಂಡ ಮಹಾನ್ ವ್ಯಕ್ತಿ, ಸಮಾಜದ ಏಳ್ಗೆಗೆ ಅವರ ಶ್ರಮ ಹಾಕಿಕೊಟ್ಟ ಹಾದಿ ದಿಕ್ಸೂಚಿಯಂತೆ ರೂಪುಗೊಂಡಿದೆ. ಧಾರ್ಮಿಕ ಆಚರಣೆಗಳಲ್ಲಿ ಜಾತಿ ಪದ್ಧತಿಯನ್ನು ಅವರು ತಿರಸ್ಕರಿಸಿದ್ದರು. ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದರು ಎಂದು ತಿಳಿಸಿದರು.
ಬೈಟ್: ಶಿವಶಂಕರ್.

ಕಾರ್ಯಕ್ರಮದಲ್ಲಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಧ, ತಹಸೀಲ್ದಾರ್ ಬಾಲಕೃಷ್ಣ, ತಾಲ್ಲೂಕು ಪಂಚಾಯತಿ ಇ.ಓ ಶ್ರೀನಾಥ್ ಗೌಡ, ಮುಖಂಡರಾದ ಶಾಂತಕುಮಾರ್, ಪ್ರಸನ್ನಕುಮಾರ್, ಜಗನ್ನಾಥ್, ರಾಜಣ್ಣ, ಮಹೇಶ್, ಇನ್ನು ಹಲವು‌ ಮುಖಂಡರು ಜನಾಂಗದ ಪ್ರಮುಖರು ಇದ್ದರು.

ಅಕ್ಷಯ್.ವಿ, ದೇವನಹಳ್ಳಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!