ಮೋಕ : ತಾಲೂಕಿನ ಮೋಕ ಹೋಬಳಿಯ ಯರಗುಡಿ ಗ್ರಾಮದ ರಾಮು ಎಂಬುವವರ ಜಮೀನಿನಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿದ ನೂಜಿವೀಡು ಸಂಸ್ಥೆಯ ಸಂಧ್ಯ ಭತ್ತದ ತಳಿಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕ್ಷೇತ್ರೋತ್ಸವದಲ್ಲಿ ಸಂಸ್ಥೆಯ ಮ್ಯಾನೇಜರ್ ಪಿ.ಜಿ ಶಿವಕುಮಾರ್ ರವರು ಸಂಧ್ಯ ಭತ್ತದ ತಳಿಯ ಕುರಿತು ಈ ತಳಿಯು ಹೊಸ ಸಂಶೋಧಿತ ತಳಿಯಾಗಿದ್ದು ಈ ತಳಿಯು ಅಲ್ಪಾವಧಿಯಲ್ಲಿ ಅಂದರೆ 130 ರಿಂದ 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕಡಿಮೆ ಖರ್ಚಿನಲ್ಲಿ ಅತ್ಯಧಿಕ ಇಳುವರಿಯನ್ನು ಪಡೆಯಬಹುದು
ಈ ತಳಿಯು ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವುದರಿಂದ ಮುಂಗಾರು ಮತ್ತು ಹಿಂಗಾರಿನಲ್ಲೂ ನಾಟಿ ಮಾಡಬಹುದು, ಹಾಗೂ ರೋಗದ ಸಹಿಷ್ಣುತೆಯನ್ನು ಹೊಂದಿದ್ದು ಔಷಧಿ ಸಿಂಪಡಣೆ ಕೂಡ ಕಡಿಮೆ ಇರುತ್ತದೆ ಮತ್ತು ಭತ್ತದ ಕಾಂಡವು ಬಲಿಷ್ಠ ವಾಗಿರುವುದರಿಂದ ಗಾಳಿ ಮಳೆಗೆ ಬೀಳುವ ಸಂಭವ ಇರುವುದಿಲ್ಲ, ಇತರೆ ತಳಿಗಿಂತ ಶೇಕಡ 20ರಷ್ಟು ಇಳುವರಿಯು ಜಾಸ್ತಿ ಬರುತ್ತದೆ ಎಂದು ವಿವರಿಸಿದರು.
ಈ ಕ್ಷೇತ್ರೋತ್ಸವದಲ್ಲಿ ಎನ್. ವಂಡ್ರಪ್ಪ, ಲಕ್ಷ್ಮಿಕಾಂತ್ ರೆಡ್ಡಿ, ಪುರುಷೋತ್ತಮ್ ರೆಡ್ಡಿ, ಕೊಮ್ಮು ಗೋವಿಂದ ಎನ್.ಗೋವಿಂದಪ್ಪ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.