ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾನಹಳ್ಳಿ ಗ್ರಾಮದಲ್ಲಿ ವರಸಿದ್ಧಿ ವಿನಾಯಕ ಶ್ರೀ ಆದಿನಾಗ ಏಕದಶ ನಾಗರಾಜ ಪ್ರತಿಷ್ಠಾಪನೆ ಮಹೋತ್ಸವ ಏರ್ಪಡಿಸಲಾಗಿತ್ತು ಮಹೋತ್ಸವ ಅಂಗವಾಗಿ ಗಣಪತಿ ಹೋಮ ಕಳಶರಾದನೆ ಮೂರ್ತಿ ಹೋಮ ಕುಂಭಾಭಿಷೇಕ ನಾಗ ಹೋಮ ಅಲಂಕಾರ ಹಾಗೂ ತೀರ್ಥ ಪ್ರಸಾದ ವಿನಿಯೋಗ
ಏರ್ಪಡಿಸಲಾಗಿತ್ತು ದೇವಾಲಯದ ಧರ್ಮದರ್ಶಿಗಳಾದ ಎಂ ಗೋಪಾಲಕೃಷ್ಣರವರು ಮಾತನಾಡಿ ಈ ಹಿಂದೆ ದೇವಾಲಯದ ಸ್ಥಳದಲ್ಲಿ ಗ್ರಾಮಸ್ಥರು ಸಾಮೂಹಿಕ ನಾಗರಪಂಚಮಿ ಆಚರಿಸುತಿದ್ದರು ಆದುದರಿಂದ ಭಕ್ತಾದಿಗಳ ಆಶಯದಂತೆ ಹಾಗೂ ದೈವದೇಶದ ಮೇರೆಗೆ ನಮ್ಮ ಸ್ವಂತ ಜಮೀನಿನಲ್ಲಿ
ಈ ಧಾರ್ಮಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು. ಮುಂದೆ ಸಾರ್ವಜನಿಕರಿಗೆ ಅನುಕೂಲವಾಗವಂತೆ ಕಲ್ಯಾಣ ಮಂಟಪವು ಸಹ ನಿರ್ಮಿಸಲಾಗುವುದು ಸಾರ್ವಜನಿಕರು ದೇವಾಲಯದ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಕೋರಿದರು