Welcome to reportnowtv.in   Click to listen highlighted text! Welcome to reportnowtv.in
Monday, December 2, 2024
HomeEntertainment70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಕ್ರವರ್ತಿ

70th National Film Awards: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಮಿಥುನ್ ಚಕ್ರವರ್ತಿ

70ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇಂದು (ಅ.8) ದೆಹಲಿಯಲ್ಲಿ ನಡೆದಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟಿಸುತ್ತಿರುವ ಹಿರಿಯ ನಟ ಮಿಥುನ್ ಚಕ್ರವರ್ತಿಗೆ (Mithun Chakraborty) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ:70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಹಿರಿಯ ನಟ ಮಿಥುನ್ ಚಕ್ರವರ್ತಿ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನೂ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’ ಮತ್ತು ಈ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ. ಅದಷ್ಟೇ ಅಲ್ಲ, ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ವಿಭಾಗದಲ್ಲಿ `ಕೆಜಿಎಫ್ 2’ಗೆ ರಾಷ್ಟ್ರ ಪ್ರಶಸ್ತಿ ದಕ್ಕಿದೆ. ಚಿತ್ರದ ನಿರ್ಮಾಣ ಸಂಸ್ಥೆಯ ರೂವಾರಿ ವಿಜಯ್ ಕಿರಗಂದೂರು ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಲಾಗಿದೆ.


70
ನೇ ರಾಷ್ಟ್ರ ಪ್ರಶಸ್ತಿ ಸಮಾರಂಭ ಇಂದು (ಅ.8) ದೆಹಲಿಯಲ್ಲಿ ನಡೆದಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಟಿಸುತ್ತಿರುವ ಹಿರಿಯ ನಟ ಮಿಥುನ್ ಚಕ್ರವರ್ತಿಗೆ (Mithun Chakraborty) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ:70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

Advertisement

70ನೇ ರಾಷ್ಟ್ರ ಪ್ರಶಸ್ತಿ ಪಡೆದ ವಿಜೇತರ ಪಟ್ಟಿ ಈ ಕೆಳಗಿನಂತಿದೆ:

ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟಿ – ನಿತ್ಯಾ ಮೆನನ್ ಮತ್ತು ಮಾನಸಿ ಪರೇಖ್
ಅತ್ಯುತ್ತಮ ಚಲನಚಿತ್ರ- ಆಟಂ (ಮಲಯಾಳಂ)
ಅತ್ಯುತ್ತಮ ಜನಪ್ರಿಯ ಚಿತ್ರ- ಕಾಂತಾರ (ಕನ್ನಡ)
ಅತ್ಯುತ್ತಮ ನಿರ್ದೇಶಕ – ಸೂರಜ್ ಬರ್ಜಾತ್ಯ
ಅತ್ಯುತ್ತಮ ಪೋಷಕ ನಟಿ – ನೀನಾ ಗುಪ್ತಾ
ಅತ್ಯುತ್ತಮ ಪೋಷಕ ನಟ – ಪವನ್ ರಾಜ್ ಮಲ್ಹೋತ್ರಾ
ಅತ್ಯುತ್ತಮ ಚೊಚ್ಚಲ ಚಿತ್ರ- ಫೌಜಾ, ಪ್ರಮೋದ್ ಕುಮಾರ್
ಅತ್ಯುತ್ತಮ ತೆಲುಗು ಚಿತ್ರ – ಕಾರ್ತಿಕೇಯ 2
ಅತ್ಯುತ್ತಮ ತಮಿಳು ಚಿತ್ರ – ಪೊನ್ನಿಯಿನ್ ಸೆಲ್ವನ್ -ಭಾಗ 1
ಅತ್ಯುತ್ತಮ ಪಂಜಾಬಿ ಚಿತ್ರ – ಬಾಘಿ ದಿ ಧೀ
ಅತ್ಯುತ್ತಮ ಒಡಿಯಾ ಚಿತ್ರ – ದಮನ್
ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೇಲಕ್ಕ ಸಿಸಿ 225/2009 (ತರುಣ್ ಮೂರ್ತಿ)
ಅತ್ಯುತ್ತಮ ಮರಾಠಿ ಚಿತ್ರ – ವಾಲ್ವಿ
ಅತ್ಯುತ್ತಮ ಕನ್ನಡ ಚಿತ್ರ – ಕೆಜಿಎಫ್ ಪಾರ್ಟ್ 2
ಅತ್ಯುತ್ತಮ ಹಿಂದಿ ಚಿತ್ರ – ಗುಲ್‌ಮೊಹರ್
ವಿಶೇಷ ಪ್ರಶಸ್ತಿ- ಗುಲ್‌ಮೊಹರ್‌ನಲ್ಲಿ ಮನೋಜ್ ಬಾಜಪೇಯಿ ಮತ್ತು ಕಾಲಿಖಾನ್‌ನಲ್ಲಿ ಸಂಜೋಯ್ ಸಲಿಲ್ ಚೌಧರಿ
ಅತ್ಯುತ್ತಮ ಆ್ಯಕ್ಷನ್ ನಿರ್ದೇಶನ – ಕೆಜಿಎಫ್ ಚಾಪ್ಟರ್ 2 (ಅನ್ಬರಿವ್)
ಅತ್ಯುತ್ತಮ ಸಾಹಿತ್ಯ – ಫೌಜಾ
ಅತ್ಯುತ್ತಮ ಸಂಗೀತ ನಿರ್ದೇಶಕ – ಪ್ರೀತಮ್ (ಹಾಡುಗಳು), ಎ.ಆರ್.ರೆಹಮಾನ್ (ಹಿನ್ನೆಲೆ ಸಂಗೀತ)
ಅತ್ಯುತ್ತಮ ಮೇಕಪ್ – ಅಪರಾಜಿತೋ
ಅತ್ಯುತ್ತಮ ಕಾಸ್ಟ್ಯೂಮ್ – ನಿಕ್ಕಿ ಜೋಶಿ (ಕಛ್ ಎಕ್ಸ್ಪ್ರೆಸ್)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ – ಅಪರಾಜಿತೋ
ಅತ್ಯುತ್ತಮ ಸಂಕಲನ – ಆಟಂ
ಅತ್ಯುತ್ತಮ ಸೌಂಡ್ ಡಿಸೈನ್ – ಪೊನ್ನಿಯಿನ್ ಸೆಲ್ವನ್ -ಪಾರ್ಟ್ 1
ಅತ್ಯುತ್ತಮ ಚಿತ್ರಕಥೆ – ಆಟಂ
ಅತ್ಯುತ್ತಮ ಸಂಭಾಷಣೆ – ಗುಲ್‌ಮೊಹರ್
ಅತ್ಯುತ್ತಮ ಛಾಯಾಗ್ರಹಣ – ಪೊನ್ನಿಯಿನ್ ಸೆಲ್ವನ್ -ಭಾಗ 1
ಅತ್ಯುತ್ತಮ ಗಾಯಕಿ- ಬಾಂಬೆ ಜಯಶ್ರೀ (ಚಾಯುಂ ವೆಲ್ಲಿ, ಸೌದಿ ವೆಲ್ಲಕ ಮಲಯಾಳಂ ಸಿನಿಮಾ)
ಅತ್ಯುತ್ತಮ ಗಾಯಕ- ಅರಿಜಿತ್ ಸಿಂಗ್ (ಕೇಸರಿಯಾ ಸಾಂಗ್ ‘ಬ್ರಹ್ಮಾಸ್ತ್ರ’ ಸಿನಿಮಾ)

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!